Home » Mangalore: ‘ಎದ್ದು, ಬಿದ್ದು ರಾತ್ರಿಯಿಡೀ ಹೋರಾಡಿ, ಗೆದ್ದು ಬಾ ಗೆಳೆಯ’ ಸ್ನೇಹಿತನ ಫಸ್ಟ್ ನೈಟ್ ಗೆ ಬ್ಯಾನರ್ ಮೂಲಕ ವಿಶ್!

Mangalore: ‘ಎದ್ದು, ಬಿದ್ದು ರಾತ್ರಿಯಿಡೀ ಹೋರಾಡಿ, ಗೆದ್ದು ಬಾ ಗೆಳೆಯ’ ಸ್ನೇಹಿತನ ಫಸ್ಟ್ ನೈಟ್ ಗೆ ಬ್ಯಾನರ್ ಮೂಲಕ ವಿಶ್!

by ಹೊಸಕನ್ನಡ
0 comments
First night wish Banner

First night wish Banner : ಸಾಮಾನ್ಯವಾಗಿ ಯಾರಾದರು ಸಾಧನೆ, ಸೇವೆ ಮಾಡಿದವರನ್ನು ಗುರುತಿಸಿ ಬ್ಯಾನರ್(Banner’s) ಇಲ್ಲವೆ ಫ್ಲೆಕ್ಸ್(Flex) ಹಾಕಿ ವಿಷ್ ಮಾಡೋದು ಸಹಜ. ಇನ್ನು ಗೆಳೆಯರೆಲ್ಲರೂ ಸೇರಿ ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್‌ಗಳನ್ನು ಹಾಕಿ ಶುಭಹಾರೈಸುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಅಥವಾ ಹೆಚ್ಚು ಆತ್ಮಿಯರಾಗಿದ್ದರೆ ಅವರ ಅಗಲಿಕೆಯ ನಂತರವೂ ಬ್ಯಾನರ್ ಹಾಕಿರುವುದಿದೆ. ಆದರೆ ಮದುವೆಯ ಬಳಿಕ ಆಗುವ ಮೊದಲ ರಾತ್ರಿಗೆ ಬ್ಯಾನರ್ ಹಾಕಿ ಶುಭಕೋರಿರುವುದನ್ನು (First night wish Banner) ನೀವು ಎಲ್ಲಾದರು ನೋಡಿದ್ದೀರಾ? ಈ ಪ್ರಶ್ನೆ ನಿಮಗೆ ಆಶ್ಚರ್ಯ ಮತ್ತು ಮುಜುಗರ ತಂದರೂ ಇಂಥಹದೊಂದು ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಸದ್ಧುಮಾಡುತ್ತಿದೆ.

ಹೌದು, ಮಂಗಳೂರು ಮಹಾನಗರ ಪಾಲಿಕೆ(Mangalore mahanagara palike)ವ್ಯಾಪ್ತಿಯ ಕದ್ರಿ(Kadri) ಪೊಲೀಸ್‌ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿಕೊಂಡಂತೆ ಯುವಕನೊಬ್ಬನ “ಮದುವೆಯ ರಾತ್ರಿಯ ಸಂಭ್ರಮ” ಎಂಬ ಶೀರ್ಷಿಕೆಯಲ್ಲಿ ಬ್ಯಾನರ್ ಒಂದನ್ನು ಅಳವಡಿಸಲಾಗಿದ್ದು ವ್ಯಂಗ್ಯದ ಜೊತೆಗೆ ಒಂದು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಸಖತ್ ಸದ್ಧುಮಾಡುತ್ತಿದೆ.

ಅಂದಹಾಗೆ ಈ ಬ್ಯಾನರ್ ಅಲ್ಲಿ ನವ ವಿವಾಹಿತನಾದ ಸುದರ್ಶನ್(Sudarshan) ಅವರ ಫೋಟೋವನ್ನು ದೊಡ್ಡದಾಗಿ ಹಾಕಲಾಗಿದ್ಧು ಸುದರ್ಶನ್ ಅಭಿಮಾನಿ ಬಳಗ ಎಂದು ಬರೆಯಲಾಗಿದೆ. ಜೊತೆಗೆ ನಮ್ಮ ಮುಗ್ಧ ಗೆಳೆಯ, ರಸಿಕ ಇಂದಿನ ಮದುಮಗ ಎಂದು ಹಾಕಲಾಗಿದೆ. ಇದರೊಂದಿಗೆ “ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯ” ಎಂದು ಸುದರ್ಶನ್ ಅವರು ಸ್ನೇಹಿತರು ಶುಬಭ ಹಾರೈಸಿ ಸರ್ಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ.

ಈ ಬ್ಯಾನರ್ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು(Advertisement)ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ. ಅನೇಕ ನೆಟ್ಟಿಗರು ಇದರ ವಿರುದ್ಧ ಅಪಸ್ವರ ಎತ್ತಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಕೂಡ “ಮಳೆಗೆ ಚಳಿಗೆ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಇಂತಹ ಅನಧಿಕೃತ, ಮತ್ತು ಅಶ್ಲೀಲ ಬ್ಯಾನರ್‌ಗಳ ವಿರುದ್ದ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಭೀಕರ ಅಪಘಾತ – ಇಬ್ಬರು ಪಾದಚಾರಿಗಳು ದುರ್ಮರಣ

You may also like

Leave a Comment