Home » ಮಂಗಳೂರು : ರಿಕ್ಷಾದಲ್ಲಿ ಮರೆತು ಹೋದ ದುಬಾರಿ ವಸ್ತುಗಳನ್ನು ಹಿಂತಿರುಗಿಸಿದ ಚಾಲಕ | ಎಲ್ಲೆಡೆ ಭಾರೀ ಪ್ರಶಂಸೆ

ಮಂಗಳೂರು : ರಿಕ್ಷಾದಲ್ಲಿ ಮರೆತು ಹೋದ ದುಬಾರಿ ವಸ್ತುಗಳನ್ನು ಹಿಂತಿರುಗಿಸಿದ ಚಾಲಕ | ಎಲ್ಲೆಡೆ ಭಾರೀ ಪ್ರಶಂಸೆ

by Mallika
0 comments

ಮನುಷ್ಯನಲ್ಲಿ ಮಾನವೀಯತೆ ಇದೆ ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ನಡೆಯುತ್ತದೆ. ಹಣಕ್ಕಾಗಿ, ಒಡವೆಗಾಗಿ ಕೊಲೆ ಸುಲಿಗೆ ಮಾಡುವಂತಹ ನಿಷ್ಕರುಣಿ ಮನುಷ್ಯರಲ್ಲಿ ಇಂತಹ ಸಹೃದಯ ಮನುಷ್ಯರು ಯಾವುದೇ ದೇವರಿಗೂ ಕಡಿಮೆ ಇಲ್ಲ ಎಂದೇ ಹೇಳಬಹುದು. ಹೌದು ಮಂಗಳೂರಿನ ರಿಕ್ಷಾ ಚಾಲಕರೊಬ್ಬರು ಜನಮೆಚ್ಚುವ ಕೆಲಸ ಮಾಡಿದ್ದಾರೆ.

ತನ್ನ ರಿಕ್ಷಾದಲ್ಲಿ ವ್ಯಕ್ತಿಯೊಬ್ಬರು ಪ್ರಯಾಣಿಸಿದ್ದ ಸಂದರ್ಭದಲ್ಲಿ ರಿಕ್ಷಾದಲ್ಲೇ ಬಿಟ್ಟುಹೋಗಿದ್ದ ಮೌಲ್ಯಯುತ ವಸ್ತುಗಳನ್ನು ಆಟೋ ಚಾಲಕ ವಾಪಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿನ್ನೆ ನಡೆದಿದೆ.

ಎಗ್ ಬರ್ಟ್ ಪಿರೇರಾ ಎಂಬವರು ಬಿಜೈ ಕ್ರಾಸ್ ರೋಡ್ ಇಂದ ಬಾವುಟಗುಡ್ಡೆಗೆ ಆಟೋದಲ್ಲಿ ಹೋಗುವಾಗ ಆಟೋವೊಂದರಲ್ಲಿ ಬ್ಯಾಗ್ ಮತ್ತು ಅದರಲ್ಲಿ ಎರಡು ಮೊಬೈಲ್, 25 ಸಾವಿರ ನಗದು ಹಣ,ಎಟಿಎಂ ಕಾರ್ಡ್ ಡಾಕ್ಯುಮೆಂಟ್ಸ್ ಗಳನ್ನು ಮರೆತು ಬಿಟ್ಟು ಹೋಗಿದ್ದಾರೆ.

ಅದನ್ನು ಆಟೋ ಡ್ರೈವರ್ ಉಮಾನಾಥ್ ಕುಮಾರ್ ಕೋಡಿಕಲ್ ಎಂಬವರು ಪ್ರಾಮಾಣಿಕವಾಗಿ ಅವರಿಗೆ ಹಿಂತಿರುಗಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಹುಶಃ ಇಂತವರಿಂದಲೇ ಇರಬೇಕು ಕಾಲಕಾಲಕ್ಕೆ ಮಳೆ ಬೆಳೆ ಎಲ್ಲ ಆಗುವುದು ಇಂತವರ ಈ ಸಹೃದಯಿ ಗುಣದಿಂದ ಎಂದೇ ಹೇಳಬಹುದು.

You may also like

Leave a Comment