Home » Mangaluru: ಮಂಗಳೂರು ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !!

Mangaluru: ಮಂಗಳೂರು ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !!

0 comments

 

Mangaluru: ಮಂಗಳೂರಿನಲ್ಲಿ ವಿದ್ಯಾರ್ಥಿನಿಯೋರ್ವಳು ಕೆಲವು ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ ಶಂಕೆ ವ್ಯಕ್ತವಾಗಿದೆ.

ಹೌದು, ಪುತ್ತೂರಿನ(Putturu) ಪುರುಷರ ಕಟ್ಟೆಯ ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಆಕೆಯ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಅಂದಹಾಗೆ ವಿದ್ಯಾರ್ಥಿನಿಯ ಅಪ್ಪ ಸಾವನ್ನಪ್ಪಿದ್ದ ಕಾರಣ ಮಂಗಳೂರಿನ ಕದ್ರಿಯಲ್ಲಿರುವ ಆಕೆಯ ದೊಡ್ಡಪ್ಪ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ಮಾಡೂರು ಎಂಬಲ್ಲಿನ ಪಿಜಿಯಲ್ಲಿ ಯುವತಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಪಿಜಿಗೆ ಅನ್ಯಕೋಮಿನ ಯುವಕನೋರ್ವ ಬರುತ್ತಿದ್ದು ಆತ ಡ್ರಗ್ಸ್ ಚಟ ಹತ್ತಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಯುವತಿಯ ದೊಡ್ಡಪ್ಪನಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಪ್ರಕರಣ ದಾಖಲಿಸಿದ ಪೋಲೀಸರು ಆಕೆ ತನ್ನ ಸ್ಕೂಟರ್‌ನೊಂದಿಗೆ ನಾಪತ್ತೆಯಾಗಿದ್ದನ್ನು ಮನಗಂಡಿದ್ದಾರೆ. ಅಲ್ಲದೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಕೌಂಟ್‍ನಲ್ಲಿ ಲಕ್ಷಾಂತರ ರೂ. ಹಣ ಇದ್ದು, ಇದೀಗ ಪೊಲೀಸರು ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಅಲ್ಲದೆ ನಾಪತ್ತೆ ಆಗುವ ಮೊದಲು ಖಾತೆಯಿಂದ ಸುರತ್ಕಲ್‍ನ ಎಟಿಎಂ ಒಂದರಲ್ಲಿ ಹಣ ವಿಥ್ ಡ್ರಾ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಆದರೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅನ್ಯಕೋಮಿನ ಯುವಕನೊಬ್ಬನ ಜೊತೆ ಬೆಂಗಳೂರಿಗೆ ಯುವತಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

You may also like

Leave a Comment