Home » ಮಂಗಳೂರು: ಬ್ಯಾಂಕ್‌ ಅಧಿಕಾರಿ ಹೋಟೆಲ್‌ನ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಸಾವು ಪ್ರಕರಣ! ಕಾರಣ ಬಹಿರಂಗ!!

ಮಂಗಳೂರು: ಬ್ಯಾಂಕ್‌ ಅಧಿಕಾರಿ ಹೋಟೆಲ್‌ನ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಸಾವು ಪ್ರಕರಣ! ಕಾರಣ ಬಹಿರಂಗ!!

by Mallika
1 comment
Mangalore crime news

Mangalore Crime News: ಮಂಗಳೂರಿನ ಹೋಟೆಲೊಂದರ ಸ್ವಿಮ್ಮಿಂಗ್‌ಪೂಲ್‌ನಲ್ಲಿ ವ್ಯಕ್ತಿಯೋರ್ವ ಮೃತದೇಹ ನಿನ್ನೆ ಪತ್ತೆಯಾಗಿದ್ದು, ಮೃತ ಪಟ್ಟಿರುವ ವ್ಯಕ್ತಿ ಬ್ಯಾಂಕ್‌ ಅಧಿಕಾರಿ ಕೇರಳದ ಗೋಪು ನಾಯರ್‌ ಅವರು ಪಾನಮತ್ತರಾಗಿದ್ದ ಕಾರಣ ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ(Mangalore Crime News).

ಈ ಘಟನೆ ನಗರದ ಪ್ರತಿಷ್ಠಿತ ಹೋಟೆಲ್‌ ಮೋತಿ ಮಹಲ್‌ನ ಸ್ಮಿಮ್ಮಿಂಗ್‌ ಪೂಲ್‌ನಲ್ಲಿ ನಡೆದಿತ್ತು.

ಮೃತಪಟ್ಟ ಅಧಿಕಾರಿಯನ್ನು ಬ್ಯಾಂಕ್‌ ಅಧಿಕಾರಿ ಎಂದು ತಿಳಿದುಬಂದಿದೆ. ಯೂನಿಯನ್‌ ಬ್ಯಾಂಕ್‌ ಅಧಿಕಾರಿ ಹುದ್ದೆಯ ವ್ಯಕ್ತಿ ಎಂದು ತಿಳಿದು ಬಂದಿದೆ. ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್‌ ನಾಯರ್‌ ಎಂದು ಗುರುತಿಸಲಾಗಿತ್ತು.

ನಿನ್ನೆ ಮಂಗಳೂರಿಗೆ ಬಂದಿದ್ದ ಇವರು ಮೋತಿ ಮಹಲ್‌ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದು, ನಿನ್ನೆ ಬೆಳಿಗ್ಗೆ 4 ಗಂಟೆಗೆ ಹೋಟೆಲ್‌ ರೂಮ್‌ನಿಂದ ಹೊರ ಹೋಗಿದ್ದು, ಈಜುಕೊಳಕ್ಕೆ ಇಳಿಯುವ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ರೂಮ್‌ನಲ್ಲಿ ಮದ್ಯದ ಬಾಟಲಿ, ಆಹಾರ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿತ್ತ. ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹನ್ನೊಂದು ಅಡಿ ಆಳದಲ್ಲಿದ್ದ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಗೋಪು ಆರ್‌ ನಾಯರ್‌ ಅವರ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದಿದ್ದು, ಈಜುತ್ತಿರುವಾಗ ಮೇಲೆ ಬರಲು ಸಾಧ್ಯವಾಗದೆ ಮುಳುಗಿ ಸಾವು ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣದಲ್ಲಿ ರಾತ್ರೋ ರಾತ್ರಿ ಕಳಚಿತು BJP ಹಿಂದೂ ನಾಯಕರ ಮುಖವಾಡ ! ನಿನ್ನೆ ಸೌಜನ್ಯಳ ಮನೆ ಹೊಕ್ಕ ಆ ಭೂಪರು ಮಾಡಿದ್ದೇನು ?- Part-1

You may also like

Leave a Comment