Home » Mangaluru: ಸ್ಕೂಟರ್‌ನಲ್ಲಿ ಭಿನ್ನಕೋಮಿನ ಸಹದ್ಯೋಗಿ ಜೋಡಿ ಪಯಣ; ತಡೆದ ಬಜರಂಗದಳ ಕಾರ್ಯಕರ್ತರು- ಮುಂದೇನಾಯ್ತು?

Mangaluru: ಸ್ಕೂಟರ್‌ನಲ್ಲಿ ಭಿನ್ನಕೋಮಿನ ಸಹದ್ಯೋಗಿ ಜೋಡಿ ಪಯಣ; ತಡೆದ ಬಜರಂಗದಳ ಕಾರ್ಯಕರ್ತರು- ಮುಂದೇನಾಯ್ತು?

1 comment
Mangaluru

Mangaluru: ಸೋಮವಾರ ಸಂಜೆ ಅನ್ಯಕೋಮಿನ ಜೋಡಿಯೊಂದನ್ನು ಬಜರಂಗದಳ ಕಾರ್ಯಕರ್ತರು ತಡೆದಿರುವ ಘಟನೆಯೊಂದು ನಡೆದಿದೆ. ಈ ಮೂಲಕ ಮತ್ತೆ ಮಂಗಳೂರಿನಲ್ಲಿ ನೈತಿಕ ಪೊಲೀಸ್‌ ಗಿರಿ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ(Mangaluru) ಮಾರ್ಗನ್ಸ್‌ ಗೇಟ್‌ ಬಳಿ ನಡೆದಿದೆ. ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿರುವ ಸಂದರ್ಭದಲ್ಲಿ ಕಾರ್ಯಕರ್ತರು ತಡೆದಿದ್ದಾರೆ.

ಮಂಗಳೂರಿನ ಮಂಕಿ ಸ್ಟ್ಯಾಂಡ್‌ ಬಳಿಯ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಈ ಭಿನ್ನಕೋಮಿನ ಜೋಡಿಯು ತಮ್ಮ ಕೆಲಸ ಬಿಟ್ಟು ಸ್ಕೂಟರ್‌ನಲ್ಲಿ ಜೊತೆಯಾಗಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಜೋಡಿಯನ್ನು ಹಿಂಬಾಲಿಸಿದ್ದಾರೆ.

ಅನಂತರ ಎರಡು ಕೋಮಿನ ಯುವಕರು ಜಮಾಯಿಸಿದ್ದಾರೆ. ಮಾತಿನ ಚಕಮಕಿ ನಡೆದಿದೆ. ಅನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಜೋಡಿಯನ್ನು ವಶಕ್ಕೆ ಪಡೆದು ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಹೋಗಿರುವ ಕುರಿತು ವರದಿಯಾಗಿದೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾದ ಕುರಿತು ವರದಿಯಾಗಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಇದನ್ನೂ ಓದಿ: Belthangady: ಬೆಳ್ತಂಗಡಿ; ಕೋಪಗೊಂಡ ಕಾಡಾನೆ, ದಾಡೆಯ ಮೂಲಕ ಕಾರನ್ನು ಜಖಂಗೊಳಿಸಿದ ಗಜ; ಬೆಳಗ್ಗೆ ಶಾಂತರೂಪದಲ್ಲಿ ಆನೆ, ಆಮೇಲೆ ವ್ಯಗ್ರಗೊಳ್ಳಲು ಕಾರಣವೇನು?

You may also like

Leave a Comment