Home » ಮಂಗಳೂರು: ಕೋತಿ ರಾಜ್ ತರಹ ಪೊಲೀಸ್ ಕಮಿಷನರ್ ಸರಸರನೆ ದುರ್ಗದ ಕೋಟೆ ಹತ್ತುತ್ತಿರುವ ವೀಡಿಯೋ ವೈರಲ್

ಮಂಗಳೂರು: ಕೋತಿ ರಾಜ್ ತರಹ ಪೊಲೀಸ್ ಕಮಿಷನರ್ ಸರಸರನೆ ದುರ್ಗದ ಕೋಟೆ ಹತ್ತುತ್ತಿರುವ ವೀಡಿಯೋ ವೈರಲ್

0 comments

ಚಿತ್ರದುರ್ಗ: ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಕೋಟೆನಾಡಿನ ಕೋತಿ ರಾಜ್ ತರಹ ಸರಸರನೆ ಚಿತ್ರದುರ್ಗದ ಕೋಟೆಯನ್ನು ಹತ್ತುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಸ್ತುತ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಶಿಕುಮಾರ್ ಮೂಲತಃ ಚಿತ್ರದುರ್ಗದವರು. ಇತ್ತೀಚಿಗೆ ತಮ್ಮ ಹುಟ್ಟೂರು ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿದ್ದರು ಶಶಿಕುಮಾರ್. ಅಲ್ಲಿ ಅವರು, ಬರಿಗಾಲಿನಲ್ಲೇ ಚಿತ್ರದುರ್ಗದ ಕಲ್ಲಿನ ಕೋಟೆ ಮೇಲೆ ಹತ್ತಿದ್ದು, ಆ ವಿಡಿಯೋವನ್ನು ‘ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ’ ಎಂಬ ಬರಹದೊಂದಿಗೆ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇಂತಹ ಕಡಿದಾದ ಕೋಟೆಯನ್ನು ಕೂಡಾ ಏರಬಲ್ಲ ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆಯ ಕಲ್ಲಿನ ಗೋಡೆಯನ್ನು ಹತ್ತಿ ಆಶ್ಚರ್ಯ ಮೂಡಿಸಿದ್ದಾರೆ. ಐಪಿಎಸ್ ಅಧಿಕಾರಿ ಹತ್ತುತ್ತಿರುವ ದೃಶ್ಯ ನೋಡಿದ ಅಭಿಮಾನಿಗಳು ಮತ್ತು ಚಿತ್ರದುರ್ಗದ ಜನತೆ ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್ ವೀಡಿಯೋ ?

https://m.facebook.com/story.php?story_fbid=pfbid0NbwNaNp8P7DZQ12x5CBKyfyi94Vfqnkae34kRdGKRHkNsu6hvB9a4yi38b4AyN8Jl&id=100027165841650

You may also like

Leave a Comment