Home » ಬೆಳ್ಳಾರೆ : ಯುವತಿಯ ಮೊಬೈಲ್ ಸ್ಫೋಟ

ಬೆಳ್ಳಾರೆ : ಯುವತಿಯ ಮೊಬೈಲ್ ಸ್ಫೋಟ

by Praveen Chennavara
0 comments

ಯುವತಿಯೊಬ್ಬರ ಮೊಬೈಲ್ ಒಂದು ದಿಢೀರನೆ ಸ್ಪೋಟಗೊಂಡು ಸುಟ್ಟುಹೋದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.

ಒಂದೂವರೆ ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ಅ್ಯಪ್ ನಿಂದ ಆನ್ ಲೈನ್ ಮೂಲಕ ರೆಡ್ ಮಿ ನೋಟ್ 8 ಎನ್ನುವ ಮೊಬೈಲ್ ಸೆಟ್ಟನ್ನು ಖರೀದಿಸಿದ ಮೊಬೈಲ್‌ನಲ್ಲಿ ಕಳೆದ ಎರಡು ದಿನಗಳ ಹಿಂದೆ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮೊಬೈಲ್ ಶಾಪ್ ನಲ್ಲಿ ದುರಸ್ತಿ ಮಾಡಿಸಿದ್ದರು.

ಜೂ. 2 ರಂದು ಮಧ್ಯಾಹ್ನ ಊಟದ ಸಮಯದಲ್ಲಿ ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಹೊಟೇಲ್ ಗೆ ಬಂದು ಟೇಬಲ್ ಮೇಲೆ ಮೊಬೈಲ್ ಇಟ್ಟು ಸ್ನೇಹಿತೆಯರ ಜೊತೆ ಮಾತನಾಡುತ್ತಿರುವಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ.

ಹೋಟೆಲ್ ನಲ್ಲಿದ್ದ ಗ್ರಾಹಕರು ಮತ್ತು ಹೊಟೇಲ್ ಮಾಲಕರು, ಅಕ್ಕಪಕ್ಕದ ಅಂಗಡಿಯವರು ಅಲ್ಲಿಗೆ ಆಗಮಿಸಿದರೆನ್ನಲಾಗಿದೆ. ಹೊಟೇಲ್ ಮಾಲಕ ಉರಿಯುತ್ತಿದ್ದ ಮೊಬೈಲ್ ನ್ನು ಟೇಬಲ್ ನಿಂದ ನೆಲಕ್ಕೆ ದೂಡಿದರು. ಅಷ್ಟರಲ್ಲೇ ಟೇಬಲ್ ನ ಮೇಲ್ಬಾಗದ ಪ್ಲೈವುಡ್ ಕರಟಿ ಕಪ್ಪಾಗಿತ್ತು.

ಮೊಬೈಲ್ ಬೆಂಕಿಗಾಹುತಿಯಾದರೂ ಅದರ ಕವರ್ ನಲ್ಲಿ ಇದ್ದ ಸ್ವಾಮಿ ಕೊರಗಜ್ಜನ ಫೊಟೊ ಮಾತ್ರ ಉರಿದಿರಲಿಲ್ಲವೆನ್ನಲಾಗಿದೆ. ಮೊಬೈಲ್ ಧಿಡೀರನೆ ಸ್ಫೋಟಗೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ

You may also like

Leave a Comment