Home » ಮುರುಳ್ಯ : ಯುವತಿಯೊಂದಿಗೆ ಅಸಭ್ಯ ವರ್ತನೆ | ನವಾಝ್ ಪೊಲೀಸರ ವಶಕ್ಕೆ

ಮುರುಳ್ಯ : ಯುವತಿಯೊಂದಿಗೆ ಅಸಭ್ಯ ವರ್ತನೆ | ನವಾಝ್ ಪೊಲೀಸರ ವಶಕ್ಕೆ

by Praveen Chennavara
0 comments

ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ಯುವತಿಯೊಬ್ಬಳು ಯುವಕನೋರ್ವ ಅಸಹ್ಯವಾಗಿ ವರ್ತಿಸಿದ್ದಾನೆಂದು ಪೊಲೀಸು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವಾಜ್ ಎಂಬ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.

ಅಲೆಕ್ಕಾಡಿಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಕಲ್ಮಡ್ಕದ ಕಜೆ ನವಾಜ್ (29) ಎಂಬಾತ ಅದೇ ಕಟ್ಟಡದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿರುವ ತಾಯಿಯೊಂದಿಗೆ ವಾಸವಿರುವ ಯುವತಿಗೆ ಕೈಸನ್ನೆ ಮಾಡುವುದು ಬಟ್ಟೆ ಕಳಚುವುದು ಮತ್ತು ಬಟ್ಟೆ ಒಗೆಯುವಾಗ ಇಣುಕಿ ನೋಡುವುದು ಈ ರೀತಿಯಾಗಿ ಅಸಭ್ಯವಾಗಿ ವರ್ತಿಸುವುದೆಂದು ಯುವತಿ ದೂರು ನೀಡಿದ್ದಳು.

You may also like

Leave a Comment