Home » ಕಡಬ : ಪಿಕಪ್ ವಾಹನದಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಐತ್ತೂರು ಗ್ರಾ.ಪಂ

ಕಡಬ : ಪಿಕಪ್ ವಾಹನದಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಐತ್ತೂರು ಗ್ರಾ.ಪಂ

by Praveen Chennavara
0 comments

ಕಡಬ: ಐತ್ತೂರು ಗ್ರಾಮದ ಮೇಲಿನ ಕಲ್ಲಾಜೆಯಿಂದ ಆಜನ ರಸ್ತೆಯ ಕಲ್ಲಾಜೆ ತೋಡಿನ ಬಳಿ ವಾಹನದಲ್ಲಿ ತಂದು ತ್ಯಾಜ್ಯ ಎಸಿದು ಅದ್ಯಾರೋ ಓಟ ಕಿತ್ತಿದ್ದರು.

ಇದೀಗ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಗ್ರಾಮ ಪಂಚಾಯತ್ ನಿಂದ ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ.

ನ.23ರಂದು ಯಾರೋ ಪಿಕಪ್ ವಾಹನದಲ್ಲಿ ತಂದು ಕೋಳಿ ತ್ಯಾಜ್ಯ ಎಸೆದು ಹೋಗಿರುವ ಬಗ್ಗೆ ಗ್ರಾಮ ಪಂಚಾಯತ್ ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಐತ್ತೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಸುಜಾತ ಅವರು ಕಡಬ ಪೊಲೀಸರ ಸಹಕಾರದೊಂದಿಗೆ ತ್ಯಾಜ್ಯ ಎಸೆದದವರನ್ನು ಪತ್ತೆ ಹಚ್ಚಿ ರೂ. 1000 ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ ಬಳಿಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.

You may also like

Leave a Comment