Home » ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡ ಕಮೀಷನರ್ ಶಶಿಕುಮಾರ್

ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡ ಕಮೀಷನರ್ ಶಶಿಕುಮಾರ್

0 comments

ಮಂಗಳೂರು : ರೌಡಿ ಪರೇಡ್ ನಲ್ಲಿ ಮಂಗಳೂರು ಕಮೀಷನರ್ ಶಶಿಕುಮಾರ್, ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜುಲೈ 6 ರಂದು ಪೊಲೀಸ್ ಗ್ರಾಂಡ್ ನಲ್ಲಿ ರೌಡಿಗಳಿಗೆ ಮತ್ತು ಗಾಂಜಾ ಕಳ್ಳಸಾಗಣೆ ಮಾಡುವವರಿಗೆ ಪರೇಡ್ ನಡೆದಿತ್ತು. ಪರೇಡ್ ನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿಯಾದ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಯ, ಅಂಗಿ ಬಿಚ್ಚಿಸಿ ಮೈ ಮೇಲೆ ಇರುವ ಟ್ಯಾಟೂ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ‘ತನ್ನ ಅಮ್ಮನ ಟ್ಯಾಟೂ ಹಾಕಿಸಿಕೊಂಡಿರುವುದಾಗಿ’ ಅಮನ್ ಉತ್ತರಿಸಿದಾಗ, ಮಾಡೋದೆಲ್ಲ ಮಾಡಿ ತಾಯಿ ಟ್ಯಾಟೂ ಯಾಕೆ ಹಾಕಿಸಿಕೊಂಡಿದ್ಯಾ, ನೆಟ್ಟಗೆ ಬಾಳಿದರೆ ಸಾಕು, ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ.

ಡ್ರಗ್ಸ್ ಸಪ್ಲೈ ಬಗ್ಗೆ ಕೂಡ ಅಮನ್ ನನ್ನು ಪ್ರಶ್ನಿಸಿದ ಕಮಿಷನರ್ ನೀನು ತಿನ್ನುತ್ತೀಯ ಅಥವಾ ಬೇರೆ ಅವರಿಗೆ ತಿನ್ನಿಸ್ತಿದ್ದೀಯ? ಸಪ್ಲೈ ನಿಲ್ಲಿಸಿದ್ದೀಯಾ? ಎಂದು ಕಿಚಾಯಿಸಿದ್ದಾರೆ. ಪರೇಡ್ ನಲ್ಲಿದ್ದ ರೌಡಿಗಳನ್ನು, ಗಾಂಜಾ ಕಳ್ಳಸಾಗಾಣೆ ಮಾಡುವವರನ್ನು ಸರಿಯಾಗಿಯೇ ಕಮೀಷನರ್ ಶಶಿಕುಮಾರ್ ರುಬ್ಬಿದ್ದಾರೆ. ಇವರ ಜೊತೆಗೆ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಜೊತೆಯಾಗಿದ್ದಾರೆ.

You may also like

Leave a Comment