Belthangady: ಇಂದಿನ ದಿನದಲ್ಲಿ ವಿದ್ಯುತ್ (Current) ಬಹಳ ಅವಶ್ಯಕವಾಗಿದೆ. ಸಭೆ-ಸಮಾರಂಭಗಳಿಗೆ ವಿದ್ಯುತ್ ಇಲ್ಲದಿದ್ದರೆ ಪರಿಸ್ಥಿತಿ ಕಷ್ಟಕರವಾಗಿರುತ್ತದೆ. ಸದ್ಯ ಮೇ.18ರಂದು ಬೆಳ್ತಂಗಡಿ (Belthangady) ಭಾಗದಲ್ಲಿ ವಿದ್ಯುತ್ ನಿಲುಗಡೆ ಆಗಲಿದ್ದು, ಈ ಬಗ್ಗೆ ಮೆಸ್ಕಾಂ (Mescom) ಪ್ರಕಟಣೆಯಲ್ಲಿ ತಿಳಿಸಿದೆ.
ನಿರ್ವಹಣಾ ಕಾಮಗಾರಿಯ ಹಿನ್ನೆಲೆ ಮೇ 18 ರಂದು ಗುರುವಾರ ಬೆಳ್ತಂಗಡಿ ಭಾಗದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಗುರುವಾರ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ 110/33/11 ಕೆವಿ ಗುರುವಾಯನಕೆರೆ (guruvayanakere) ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕುವೆಟ್ಟು, ಲಾಯಿಲ ಹಾಗೂ ಇಳಂತಿಲ ಮತ್ತು 33/11 ಕೆವಿ ಬೆಳ್ತಂಗಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಉಜಿರೆ (Ujire), ಬೆಳಾಲು (belal), ಬಂಗಾಡಿ ಹಾಗೂ ಕೊಲ್ಲಿ ಪೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಹಾಗಾಗಿ ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:Ramanath Rai: ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ರಮಾನಾಥ ರೈ!
