Home » ಪ್ರವೀಣ್ ನೆಟ್ಟಾರು ಹತ್ಯೆ : ಕೇರಳದ ಕಣ್ಣೂರಿನಲ್ಲಿ ಓರ್ವ ವಶಕ್ಕೆ

ಪ್ರವೀಣ್ ನೆಟ್ಟಾರು ಹತ್ಯೆ : ಕೇರಳದ ಕಣ್ಣೂರಿನಲ್ಲಿ ಓರ್ವ ವಶಕ್ಕೆ

by Praveen Chennavara
0 comments

ಕಾಸರಗೋಡು: ಹಿಂದು ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ನೆರವಾದ ಶಂಕೆಯಲ್ಲಿ ಶನಿವಾರ ಪೊಲೀಸರು ಕೇರಳದ ಕಣ್ಣೂರು ಜಿಲ್ಲೆಯ ತಲಶೇರಿ ಎಂಬಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಸ್ಥಳೀಯ ಪಾರಾಲ್ ನಿವಾಸಿ ಆಬಿದ್ ಎಂಬಾತನನ್ನು ಕಸ್ಟಡಿಗೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿರುವ ಮಾಹಿತಿ ಲಭಿಸಿದೆ.

ಜು.26ರಂದು ಬೆಳ್ಳಾರೆ ಪೇಟೆಯಲ್ಲಿ ಹಿಂದು ಮುಖಂಡ
ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿದ್ದರು.

ಘಟನೆಯಲ್ಲಿ ಕೇರಳ ಮೂಲದ ಹಂತಕರ ಕೈವಾಡವನ್ನು ಶಂಕಿಸಲಾಗಿದ್ದು, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ತನಿಖೆಗೆ ಪೊಲೀಸರ 6 ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಕೇರಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

You may also like

Leave a Comment