Home » ಪ್ರವೀಣ್ ನೆಟ್ಟಾರು ಹತ್ಯೆ : ಸುಳ್ಯ ಪಿಎಫ್‌ಐ ಕಚೇರಿಯಲ್ಲಿ ಮಹಜರು

ಪ್ರವೀಣ್ ನೆಟ್ಟಾರು ಹತ್ಯೆ : ಸುಳ್ಯ ಪಿಎಫ್‌ಐ ಕಚೇರಿಯಲ್ಲಿ ಮಹಜರು

0 comments

ಸುಳ್ಯ : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಹತ್ಯೆಗೆ ಸಂಬಂಧಿಸಿದಂತೆ ಸುಳ್ಯ ಪಿಎಫ್‌ಐ ಕಚೇರಿಯಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ.

ನಿನ್ನೆ ಬಂಧಿತರಾದ ಅಬೀದ್ ಮತ್ತು ನೌಫಾಲ್ ಕರೆದುಕೊಂಡು ಸುಳ್ಯ ಪೊಲೀಸರ ತಂಡ ಮಹಜರು ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರೋ ಪಿಎಫ್‌ಐ ಕಚೇರಿಯಲ್ಲಿ ಪೋಲಿಸರು ಮಹಜರು ನಡೆಸಿದ್ದಾರೆ.

ಆರೋಪಿಗಳಿಬ್ಬರನ್ನು ಕರೆದುಕೊಂಡು ಹೋಗಿ ಸ್ಪಾಟ್ ಮಹಜರು ಮಾಡಿದ್ದು, ಪ್ರವೀಣ್ ಹತ್ಯೆಗೆ ಇದೇ ಕಛೇರಿಯಲ್ಲಿ ಸಂಚನ್ನು ಮಾಡಲಾಗಿದೆ ಎನ್ನವ ಮಾಹಿತಿ ಇದೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ.

You may also like

Leave a Comment