Home » ಪುತ್ತೂರು : ಎ.ಸಿ. ಡಾ.ಯತೀಶ್ ಉಳ್ಳಾಲ್ ಅವರಿಗೆ ವರ್ಗಾವಣೆ ,ನೂತನ ಎ.ಸಿ.ಯಾಗಿ ಗಿರೀಶ್ ನಂದನ್

ಪುತ್ತೂರು : ಎ.ಸಿ. ಡಾ.ಯತೀಶ್ ಉಳ್ಳಾಲ್ ಅವರಿಗೆ ವರ್ಗಾವಣೆ ,ನೂತನ ಎ.ಸಿ.ಯಾಗಿ ಗಿರೀಶ್ ನಂದನ್

by Praveen Chennavara
0 comments

ಪುತ್ತೂರು:ಹಾಸನ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಗಿರೀಶ್‌ನಂದನ್ ಎಂ.ಅವರನ್ನು ಪುತ್ತೂರು ಉಪವಿಭಾಗದ ನೂತನ ಉಪವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ.

ಪುತ್ತೂರು ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ| ಯತೀಶ್ ಉಳ್ಳಾಲ್ ಅವರ ಸ್ಥಾನಕ್ಕೆ ಗಿರೀಶ್‌ನಂದನ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಆದರೆ ಡಾ|ಯತೀಶ್ ಉಳ್ಳಾಲ್ ಅವರಿಗೆ ಕರ್ತವ್ಯದ ಸ್ಥಳ ತೋರಿಸಲಾಗಿಲ್ಲ.ಅವರು ಮಡಿಕೇರಿ ಉಪವಿಭಾಗಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗಿರೀಶ್‌ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.ಬಿಎ.,ಎಂಬಿಎ ಪದವೀಧರರಾಗಿರುವ ಇವರು ಬೆಂಗಳೂರು ನಗರ ಜಿಲ್ಲೆ ನಿವಾಸಿಯಾಗಿದ್ದು ೨೦೧೭ರ ಬ್ಯಾಚ್‌ನ ಕೆಎಎಸ್ ಅಧಿಕಾರಿ.

You may also like

Leave a Comment