Home » Puttur: ಕಲ್ಲೇಗ ಟೈಗರ್ ಅಕ್ಷಯ್ ಕೊಲೆ ಪ್ರಕರಣ : ಗಾಂಜಾ ಘಾಟು ಸಂಶಯ ಬಗ್ಗೆ ಎಸ್ಪಿ ಹೇಳಿದ್ದೇನು?

Puttur: ಕಲ್ಲೇಗ ಟೈಗರ್ ಅಕ್ಷಯ್ ಕೊಲೆ ಪ್ರಕರಣ : ಗಾಂಜಾ ಘಾಟು ಸಂಶಯ ಬಗ್ಗೆ ಎಸ್ಪಿ ಹೇಳಿದ್ದೇನು?

1 comment
Puttur

Puttur: ಖ್ಯಾತ ಹುಲಿವೇಷ ತಂಡದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ (Murder Case)ಪ್ರಕರಣಕ್ಕೆ ಸಂಬಂಧಿಸಿದಂತೆ ದ. ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಮಾಹಿತಿ ನೀಡಿದ್ದು, ಅಕ್ಷಯ್ ಅವರ ಕೊಲೆ ಪ್ರಕರಣದ ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ತಿಳಿಸಿದ್ದಾರೆ.

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದ. ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿರುವ ಬಗ್ಗೆ ಯಾವುದೇ ವರದಿ ಹೊರ ಬಂದಿಲ್ಲ ಎನ್ನಲಾಗಿದೆ. ಸದ್ಯ ಅಪಘಾತದ ವಿಷಯಕ್ಕೆ ಸಂಬಂಧಿಸಿದಂತೆ ಹತ್ಯೆಯಾಗಿದೆ ಎಂಬುದು ಮೇಲ್ನೋಟದ ತನಿಖೆಯಿಂದ ಹೊರ ಬಂದಿದೆ ಎನ್ನಲಾಗಿದೆ.
ಅಕ್ಷಯ್ ಕಲ್ಲೇಗ ಓರ್ವ ರೌಡಿ ಶೀಟರ್ ಆತನ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಆರೋಪಿಗಳೆಲ್ಲರೂ ಅಕ್ಷಯ್ ಕಲ್ಲೇಗ ಅವರ ಪರಿಚಿತರು ಎನ್ನಲಾಗಿದೆ. ಹೀಗಾಗಿ, ಹಳೇ ವೈಷಮ್ಯದಿಂದ ಹತ್ಯೆ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ರಿಷ್ಯಂತ್ ಸಿಬಿ ಮಾಹಿತಿ ನೀಡಿದ್ದಾರೆ.ಸದ್ಯ, ತನಿಖೆ ನಡೆಯುತ್ತಿದ್ದು, ತನಿಖೆಯ ಬಳಿಕವಷ್ಟೇ ಅಸಲಿ ವಿಚಾರ ಹೊರಬೀಳಬೇಕಾಗಿದೆ.

 

ಇದನ್ನು ಓದಿ: B S Yadiyurappa: ಸದಾನಂದಗೌಡರ ರಾಜಕೀಯ ನಿವೃತ್ತಿ ಘೋಷಣೆ – ಅಚ್ಚರಿ ಕಾರಣ ತೆರೆದಿಟ್ಟ ಯಡಿಯೂರಪ್ಪ !!

You may also like

Leave a Comment