Home » ಪುತ್ತೂರು : ಪ್ರೀತಿ ನಿರಾಕರಿಸಿದ ಮಹಿಳೆಯನ್ನು ತಿಂಗಳಾಡಿ ಪೇಟೆಗೆ ಬರಹೇಳಿ ಕಿಡ್ನಾಪ್!!! ತಡವಾಗಿ ಬೆಳಕಿಗೆ ಬಂದ ಪ್ರಕರಣ – ಇಬ್ಬರ ಬಂಧನ

ಪುತ್ತೂರು : ಪ್ರೀತಿ ನಿರಾಕರಿಸಿದ ಮಹಿಳೆಯನ್ನು ತಿಂಗಳಾಡಿ ಪೇಟೆಗೆ ಬರಹೇಳಿ ಕಿಡ್ನಾಪ್!!! ತಡವಾಗಿ ಬೆಳಕಿಗೆ ಬಂದ ಪ್ರಕರಣ – ಇಬ್ಬರ ಬಂಧನ

0 comments

ಪುತ್ತೂರು: ನಗರದ ಹೊರವಲಯದ ತಿಂಗಳಾಡಿ ಎಂಬಲ್ಲಿ ಪ್ರೀತಿ ನಿರಾಕರಿಸಿದ ಯುವತಿಯನ್ನು ಅಪಹರಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇಬ್ಬರ ಬಂಧನವಾಗಿದೆ.

ತಿಂಗಳಾಡಿಯ ಯುವತಿಯೊರ್ವಳನ್ನು ಇಬ್ಬರು ಯುವಕರು ಸೇರಿ ಕಿಡ್ನಾಪ್ ನಡೆಸಿದ ಪ್ರಕರಣದ ಸಂಬಂಧ ಸಂಪ್ಯ ಠಾಣೆಯಲ್ಲಿ ಪ್ರಕರಣದ ಕಲಂ 341,506,363,342,34 ರಂತೆ ದಾಖಲಾಗಿದ್ದು,ಬಂಧಿತರನ್ನು ಕೆದಂಬಾಡಿ ಕೊಡುಂಗೋಣಿ ನಿವಾಸಿಗಳಾದ ಚಂದ್ರಶೇಖರ್(29) ಮತ್ತು ಜಗದೀಶ್(26) ಎಂದು ಗುರುತಿಸಲಾಗಿದೆ.

ಘಟನೆ ವಿವರ:ತಿಂಗಳಾಡಿ ನಿವಾಸಿ ಮಹಿಳೆಯೋರ್ವರನ್ನು ಆರೋಪಿಗಳ ಪೈಕಿ ಓರ್ವ ಪ್ರೀತಿ ಮಾಡುತ್ತಿದ್ದ ಅದೇ ಮಹಿಳೆಗೆ ಬೇರೊಬ್ಬರ ಜೊತೆ ಪ್ರೇಮ ಇದ್ದ ಕಾರಣ ಈತನ ಪ್ರೀತಿಯನ್ನು ನಿರಾಕರಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆರೋಪಿ ನಡುವೆ ವಾಗ್ವಾದ ಮತ್ತು ಮೊಬೈಲ್ ಚಕಮಕಿ ನಡೆದಿತ್ತು. ಆ ಬಳಿಕ ಆರೋಪಿಗಳಿಬ್ಬರು ಮಾತುಕತೆ ನಡೆಸಲು ತಿಂಗಳಾಡಿಗೆ ಬರಲು ಹೇಳಿ ಬಳಿಕ ಮಹಿಳೆಯನ್ನು ಇಬ್ಬರು ಸೇರಿ ಅಪಹರಣ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಈ ಕುರಿತು ಮಾಹಿತಿ ಬಂದ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಅಪಹರಣ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸುಳ್ಯ ತಾಲೂಕು ಕೋಡಿಯಾಲ ನಿವಾಸಿ ಶರತ್ ಕುಮಾರ್ ದೂರು ನೀಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

You may also like

Leave a Comment