Home » ಪುತ್ತೂರು : ಸರಕಾರಿ ಬಾವಿಗೆ ಬಿದ್ದು ಯುವಕ ಮೃತ್ಯು

ಪುತ್ತೂರು : ಸರಕಾರಿ ಬಾವಿಗೆ ಬಿದ್ದು ಯುವಕ ಮೃತ್ಯು

by Praveen Chennavara
0 comments

ಪುತ್ತೂರು: ಆನೆಮಜಲುವಿನಲ್ಲಿ ಸರಕಾರಿ ಬಾವಿಗೆ ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ಜು.30 ರಂದು ಬೆಳಕಿಗೆ ಬಂದಿದೆ. ಆನೆಮಜಲು ನಿವಾಸಿ ಪೆರ್ನಾ ಎಂಬವರ ಪುತ್ರ ಅವಿವಾಹಿತ ಸತೀಶ್ (35.ವ) ರವರು ಬಾವಿಗೆ ಬಿದ್ದು ಮೃತಪಟ್ಟವರು.

ಸತೀಶ್ ಕೂಲಿ ಕೆಲಸ ಮಾಡುತ್ತಿದ್ದು ಜು.29 ರಂದು ರಾತ್ರಿ ಮನೆಯಲ್ಲಿದ್ದವರು ಬೆಳಗ್ಗೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಮನೆಯ ಪಕ್ಕದ ಸರಕಾರಿ ಬಾವಿಯಲ್ಲಿ ಸತೀಶ್ ಅವರ ಮೃತ ದೇಹ ಪತ್ತೆಯಾಗಿದೆ. ಮೃತರು ತಂದೆ ಪೆರ್ನಾ, ತಾಯಿ ಯಮುನಾ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

You may also like

Leave a Comment