Home » Puttur: ಕಸ ಹಾಕಿದವನಿಂದಲೇ ಕಸ ಹೆಕ್ಕಿಸಿದ ಗ್ರಾಪಂ ಸದಸ್ಯ

Puttur: ಕಸ ಹಾಕಿದವನಿಂದಲೇ ಕಸ ಹೆಕ್ಕಿಸಿದ ಗ್ರಾಪಂ ಸದಸ್ಯ

by Praveen Chennavara
0 comments
Puttur

Puttur: ಮನೆಯ ಕಸವನ್ನು ತಂದು ರಸ್ತೆ ಬದಿಯಲ್ಲಿ ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ತಡೆದು ಹಾಕಿದ ಕಸವನ್ನು ಅವನಿಂದಲೇ ಕ್ಲೀನ್ ಮಾಡಿಸಿದ ಘಟನೆ ತಾಲೂಕಿನ ಕುಂಬ್ರದಲ್ಲಿ ನಡೆದಿದೆ (Puttur).

ಹಿಂದಿ ಮಾತನಾಡುವ ಯುವಕನೋರ್ವ ತನ್ನ ಬೈಕಿನಲ್ಲಿ ಬಂದು ಕಸವನ್ನು ಕುಂಬ್ರ‌ ಮಸೀದಿ ಬಳಿ ಹಾಕಿದ್ದ ಇದನ್ನು ನೋಡಿದ ಒಳಮೊಗ್ರು ಗ್ರಾಪಂ ಸದಸ್ಯರಾದ ವಿನೋದ್ ಶೆಟ್ಟಿಯವರು ಕಸವನ್ನು ರಸ್ತೆ ಬದಿ ಹಾಕದಂತೆ ಆತನಿಗೆ ಬುದ್ದಿವಾದ ಹೇಳಿದ್ದಾರೆ. ಬಳಿಕ ಅಲ್ಲಿ ಆತ ಹಾಕಿರುವ ಕಸವನ್ನು ಆತನಿಂದಲೇ‌ ಕ್ಲೀನ್ ಮಾಡಿಸಿದ್ದಾರೆ.

ಕಸ ಹಾಕಿದವನ ವಿಳಾಸ ಮತ್ತು ಬೈಕ್ ನಂಬರನ್ನು ಗ್ರಾಪಂ ಗೆ ನೀಡಿದ್ದು ದಂಡ ವಿಧಿಸುವಂತೆ ಪಿಡಿಒ ರವರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸೌಜನ್ಯಳ ದುಷ್ಕೃತ್ಯದ ಫೋಟೊ ಅನ್ನು ಅಮಿತ್ ಶಾಗೆ ಕಳಿಸಿದ್ದೇವೆ, ಧರ್ಮಾಧಿಕಾರಿಗೆ ನಾಚಿಕೆಯಾಗಬೇಕು- ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಗೀತಾ ಸ್ಪೋಟಕ ನುಡಿ

You may also like

Leave a Comment