Home » Puttur: ವಲ್ಮೀಕರೂಪಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರಾಜನ ರೂಪದಲ್ಲಿ ದೇವರ ದರ್ಶನ

Puttur: ವಲ್ಮೀಕರೂಪಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರಾಜನ ರೂಪದಲ್ಲಿ ದೇವರ ದರ್ಶನ

by Praveen Chennavara
1 comment
Puttur

ದೇವಸ್ಥಾನದಲ್ಲಿ ಫೆ.16ರಿಂದ ಫೆ.24ರವರೆಗೆ ನಡೆಯಲಿದೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.16ರಿಂದ ಫೆ.24ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ವೈಭವದಿಂದ ನಡೆಯಲಿದೆ.ಈ ನಡುವೆ ಫೆ.13ರಂದು ದೇವಸ್ಥಾನದಲ್ಲಿ ಅಚ್ಚರಿಯೊಂದು ಭಕ್ತರಿಗೆ ಕಂಡಿದೆ.

ಇದನ್ನೂ ಓದಿ: Valentine’s day: ಪ್ರೇಮಿಗಳ ದಿನವೇ ಹಿಂದೂ ಹುಡುಗಿಗೆ ಪ್ರಪೋಸ್ ಮಾಡಿದ ಮುಸ್ಲಿಂ ಯುವಕ – ಬಜರಂಗದಳದ ಕಾರ್ಯಕರ್ತರ ಎಂಟ್ರಿ, ನಂತರ ಆದದ್ದೇನು?

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಧಾನವಾಗಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುತ್ತದೆ.ಇಲ್ಲಿ ಉತ್ಸವ ಮೂರ್ತಿ ಹೊರತುಪಡಿಸಿ ಸುಬ್ರಹ್ಮಣ್ಯನ ಯಾವುದೇ ಶಿಲಾಮೂರ್ತಿ ಇರುವುದಿಲ್ಲ. ಇಲ್ಲಿ ಉದ್ಭವ ಹುತ್ತಕ್ಕೆ ನಿತ್ಯಪೂಜೆ ನಡೆಯುತ್ತದೆ.

ದೇವಸ್ಥಾನದಲ್ಲಿರುವ ಹುತ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ನಾಗರಹಾವಿನ ರೂಪದಲ್ಲಿ ನೆಲೆಯಾಗಿದ್ದಾನೆ ಎಂಬ ಪ್ರತೀತಿ ಮತ್ತು ನಂಬಿಕೆ ಹಿಂದಿನಿಂದಲೂ ಇದೆ.

ಇದಕ್ಕೆ ಪುಷ್ಟಿ ನೀಡುವಂತೆ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ನಾಗರಾಜನ ರೂಪದಲ್ಲಿ ಸಾರ್ವಜನಿಕರಿಗೆ ದರ್ಶನ ನೀಡಿದ್ದಾನೆ. ಗರ್ಭಗುಡಿಯ ದಕ್ಷಿಣ ದಿಕ್ಕಿನಲ್ಲಿರುವ ಸಣ್ಣ ಪ್ರವೇಶ ದ್ವಾರ(ಬಿಲದ್ವಾರ)ದ ಮೂಲಕ ನಾಗರಾಜ ಒಳ ಪ್ರವೇಶ ಮಾಡುತ್ತಿರುವುದು ಕಣ್ಣಿಗೆ ಬಿದ್ದಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ನಾಗರಾಜನ ದರ್ಶನದಿಂದ ಭಕ್ತರು ಪುಳಕಿತರಾಗಿದ್ದಾರೆ.

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್, ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಳಿಯಂ ತಥಾ, ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್, ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ, ಸಂತಾನಂ ಪ್ರಾಪ್ಯತೇ ನೂನಂ ಸಂತಾನಸ್ಯ ಚ ರಕ್ಷಕಾಃ, ಸರ್ವಬಾಧಾ ವಿನಿರ್ಮುಕ್ತಃ ಸರ್ವತ್ರ ವಿಜಯೀ ಭವೇತ್, ಸರ್ಪದರ್ಶನಕಾಲೇ ವಾ ಪೂಜಾಕಾಲೇ ಚ ಯಃ ಪಠೇತ್, ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್, ಓಂ ನಾಗರಾಜಾಯ ನಮಃ ಪ್ರಾರ್ಥಯಾಮಿ ನಮಸ್ಕರೋಮಿ. ಎಂಬ ಪ್ರಾರ್ಥನೆಯಲ್ಲಿ ಭಕ್ತರು ಭಾವಪರವಶರಾಗಿದ್ದಾರೆ.

You may also like

Leave a Comment