Home » ಪುತ್ತೂರು: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯಲ್ಲಿ ಅಗ್ನಿ ಅವಘಡ, ಅಂದಾಜು 25 ಲಕ್ಷ ರೂ. ನಷ್ಟ

ಪುತ್ತೂರು: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯಲ್ಲಿ ಅಗ್ನಿ ಅವಘಡ, ಅಂದಾಜು 25 ಲಕ್ಷ ರೂ. ನಷ್ಟ

0 comments

ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಪುತ್ತೂರು ಬೈಪಾಸ್ ನ ಸುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ಏರ್ ಕಂಡೀಶನರ್, ಫ್ರಿಡ್ಜ್ ರಿಪೇರಿ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಳಿಗೆಯಲ್ಲಿದ್ದ ಎಲ್ಲಾ ಫ್ರಿಜ್, ಏರ್ ಕಂಡಿಷನರ್ ಹಾಗೂ ಇತರೆ ಬಿಡಿಭಾಗಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಅಂದಾಜು 25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಮಾಲೀಕ ವಿವೇಕ್ ತಿಳಿಸಿದ್ದಾರೆ. ಅಗ್ನಿಶಾಮಕ ದಳದಿಂದ ಕೂಡಲೇ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.

You may also like

Leave a Comment