Home » ಪುತ್ತೂರು : ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ | ಜನ ಸೇರುತ್ತಿದ್ದಂತೆ ಹಿಂಬಾಗಿಲಿನ ಮೂಲಕ ಪರಾರಿಯಾದ ಜೋಡಿ

ಪುತ್ತೂರು : ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ | ಜನ ಸೇರುತ್ತಿದ್ದಂತೆ ಹಿಂಬಾಗಿಲಿನ ಮೂಲಕ ಪರಾರಿಯಾದ ಜೋಡಿ

by Praveen Chennavara
0 comments

ಪುತ್ತೂರು: ಮುಸ್ಲಿಂ ಮಹಿಳೆಯೋರ್ವರ ಮನೆಯಲ್ಲಿ ಹಿಂದೂ ಯುವಕನೊಬ್ಬನಿದ್ದಾನೆ, ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಒಳಗಡೆ ಇದ್ದಾರೆ ಎಂಬ ಸುದ್ದಿ ಕಾಡಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಎರಡೂ ಕೋಮಿನ ಜನರು ಜಮಾಯಿಸಿದ ಘಟನೆ ಕಬಕ ಸಮೀಪ ನಡೆದಿದೆ.

ಕಬಕ ಸಮೀಪದ ಮನೆಯೊಂದರ ಮುಂಭಾಗಲಿಗೆ ಬೀಗ ಹಾಕಲಾಗಿತ್ತು. ಎದುರಿನಿಂದ ಬೀಗ ಹಾಕಿ ಒಳಗಡೆ ಮಹಿಳೆಯ ಜೊತೆ ಆಟೋ ಚಾಲಕ ಯುವಕನೋರ್ವ ಇದ್ದಾನೆ ಎಂಬ ಸುದ್ದಿಯನ್ನು ಯಾರೋ ಹಬ್ಬಿಸಿದ್ದು, ಈ ಹಿನ್ನೆಲೆ ಮನೆಯ ಸುತ್ತ ನೂರಾರು ಮಂದಿ ಜಮಾಯಿಸುತ್ತಿದ್ದಂತೆಯೇ ನಗರ ಪೊಲೀಸರಿಗೆ ಮಾಹಿತಿ ತಿಳಿದು ಪರಿಶೀಲನೆ ನಡೆಸಿದ್ದಾರೆ.

ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮನೆಗೆ ಬೀಗ ಹಾಕಿದ್ದು, ಮನೆಯೊಳಗೆ ಯಾರು ಇಲ್ಲ ಎಂದು ಹೇಳಿ ಸ್ಥಳದಲ್ಲಿ ಜಮಾಯಿಸಿದವರನ್ನು ಚದುರಿಸಿದ್ದಾರೆ. ಪೊಲೀಸರು ತೆರಳಿದ ಬಳಿಕ ಮನೆಯೊಳಗಿದ್ದ ಮಹಿಳೆ ಮತ್ತು ಚಾಲಕ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಪೊಲೀಸರು ಮತ್ತೆ ಮನೆಯ ಸುತ್ತ ಪರಿಶೀಲನೆ ನಡೆಸುವ ವೇಳೆ ಹಿಂಬಾಗಿಲಿನ ಚಿಲಕ ತೆರೆಯಲಾಗಿದ್ದು, ಬಾಗಿಲೂ ತೆರೆಯಲಾಗಿತ್ತು. ಜನ ಸೇರುವುದನ್ನು ಕಂಡ ಇವರಿಬ್ಬರು ಹಿಂಬಾಗಿಲಿನ ಮೂಲಕ ಓಡಿ ತಪ್ಪಿಸಿಕೊಂಡಿದ್ದು, ಯಾರಿಗೂ ಗೊತ್ತಾಗಿರಲಿಲ್ಲ ಎನ್ನಲಾಗಿದೆ.

You may also like

Leave a Comment