ಪುತ್ತೂರು: ಇಲ್ಲಿನ ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರೊಂದಿಗೆ ರೈಲಿನಲ್ಲಿ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಗಳು ಪುತ್ತೂರು ರೈಲು ನಿಲ್ದಾಣದಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಪ್ರತಿಷ್ಟಿತಾ ಕಾಲೇಜಿಗೆ ಸೇರಿದ ನಾಲ್ವರು ವಿದ್ಯಾರ್ಥಿನಿಯರು ನೆಟ್ಟಣದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಯುವಕರೊಂದಿಗೆ ಮಾತುಕತೆ ನಡೆಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದ್ದು, ಮಾಹಿತಿಯ ಬೆನ್ನಲ್ಲೇ ಪುತ್ತೂರಿನ ಕಬಕ ರೈಲು ನಿಲ್ದಾಣದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು.
ವಿದ್ಯಾರ್ಥಿನಿಯರು ರೈಲಿನಿಂದ ಇಳಿಯುತ್ತಿದ್ದಂತೆ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು ಮುಸ್ಲಿಂ ಯುವಕರನ್ನು ಪ್ರಶ್ನಿಸಿದ್ದು,ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮುಸ್ಲಿಂ ಯುವಕರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಈ ಘಟನೆಗೂ ಕೆಲವೇ ಗಂಟೆಗಳ ಹಿಂದೆ ಕುಂದಾಪುರದ ಅನ್ಯಧರ್ಮದ ಜೋಡಿಯೊಂದು ಪುತ್ತೂರಿನಲ್ಲಿ ಸಿಕ್ಕಿಬಿದ್ದಿದ್ದು,ಮುಸ್ಲಿಂ ಯುವಕನೊಬ್ಬ ಮಾರ್ಕೆಟಿಂಗ್ ಜಾಬ್ ಮಾಡಿಸಿಕೊಡುವುದಾಗಿ ಹಿಂದೂ ಯುವತಿಯೊಬ್ಬಳನ್ನು ಪುತ್ತೂರು ಪೇಟೆಯಲ್ಲಿ ಸುತ್ತಾಡಿಸಿದ್ದು,ಹಿಂದೂ ಸಂಘಟನೆಗಳ ಮಾಹಿತಿಯಂತೆ ಪೊಲೀಸರು ವಶಕ್ಕೆ ಪಡೆದಿದ್ದರು.

