Home » SDPI ಕರ್ನಾಟಕ ರಾಜ್ಯದ ನೂತನ ಕಾರ್ಯದರ್ಶಿಯಾಗಿ “ಶಾಫಿ ಬೆಳ್ಳಾರೆ” ಆಯ್ಕೆ

SDPI ಕರ್ನಾಟಕ ರಾಜ್ಯದ ನೂತನ ಕಾರ್ಯದರ್ಶಿಯಾಗಿ “ಶಾಫಿ ಬೆಳ್ಳಾರೆ” ಆಯ್ಕೆ

by Praveen Chennavara
0 comments

ಸುಳ್ಯ:- ಎಸ್‌ಡಿಪಿಐ ಪಕ್ಷದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಫಿ ಬೆಳ್ಳಾರೆ ಮತ್ತು ಆನಂದ ಮಿತ್ತಬೈಲ್ ರಾಜ್ಯ ಕಾರ್ಯದರ್ಶಿ ಗಳಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್ 6 ಮತ್ತು 7 ರಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಪ್ರತಿನಿಧಿ ಸಭೆಯಲ್ಲಿ 2021-24 ರ ಅವಧಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ನೂತನ ರಾಜ್ಯಾದ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು,ಉಪಾಧ್ಯಕ್ಷರಾಗಿ ದೇವನೂರು ಪುಟ್ಟನಂಜಯ್ಯ,ಹಾಗೂ ಪ್ರೊ ಸಾಯಿದಾ ಸಾದಿಯಾ,
ಪ್ರ.ಕಾರ್ಯದರ್ಶಿ ಗಳಾಗಿ ಅಬ್ದುಲ್ ಲತೀಫ್ ಪುತ್ತೂರು,ಹಾಗೂ ಬಿ.ಆರ್.ಬಾಸ್ಕರ್ ಪ್ರಸಾದ್,ಅಫ್ಸರ್ ಕೊಡ್ಲಿಪೇಟೆ ,ಕಾರ್ಯದರ್ಶಿಗಳಾಗಿ ಶಾಫಿ ಬೆಳ್ಳಾರೆ, ಆನಂದ ಮಿತ್ತಬೈಲ್,ಅಶ್ರಫ್ ಮಾಚಾರ್,ಹಾಗೂ ಕೋಶಾಧಿಕಾರಿ ಯಾಗಿ ಖಾಲಿದ್ ಯಾದಗಿರಿ
ಕಾರ್ಯ ನಿರ್ವಹಿಸಲಿದ್ದಾರೆ.ಹಾಗೂ ಅದೇ ರೀತಿ ಆಂತರಿಕ ಚುನಾವಣೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ನೂತನ 27 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

You may also like

Leave a Comment