Home » Sullia: ವಿಶ್ವ ಹಿಂದೂ ಪರಿಷತ್‌ ಸುಳ್ಯ ಪ್ರಖಂಡದ ಅಧ್ಯಕ್ಷರಾಗಿ ಶ್ರೀಕಾಂತ್ ಗೋಳ್ವಾಲ್ಕರ್ ಆಯ್ಕೆ!

Sullia: ವಿಶ್ವ ಹಿಂದೂ ಪರಿಷತ್‌ ಸುಳ್ಯ ಪ್ರಖಂಡದ ಅಧ್ಯಕ್ಷರಾಗಿ ಶ್ರೀಕಾಂತ್ ಗೋಳ್ವಾಲ್ಕರ್ ಆಯ್ಕೆ!

0 comments

Sullia: ವಿಶ್ವ ಹಿಂದೂ ಪರಿಷತ್‌ ಸುಳ್ಯ (Sullia) ಪ್ರಖಂಡದ ನೂತನ ಅಧ್ಯಕ್ಷರಾಗಿ ಆಲೆಟ್ಟಿಯ ಗಡಿ ಪ್ರದೇಶವಾಗಿರುವ ಕಲ್ಲಪಳ್ಳಿ ಪರಿಸರದ ನಿವಾಸಿ ಕೃಷಿಕ ಶ್ರೀಕಾಂತ್ ಗೋಳ್ವಾಲ್ಕರ್ ರವರು ಆಯ್ಕೆಯಾಗಿರುತ್ತಾರೆ.

ಪುತ್ತೂರಿನ ರಾಘವೇಂದ್ರ ಮಠ ಕಲ್ಲಾರೆಯಲ್ಲಿ ಜು.1 ರಂದು ಹಿಂದೂ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯ ಕುರಿತು ಅಧಿಕೃತ ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಡಾ.ಕೃಷ್ಣ ಪ್ರಸನ್ನ, ಪ್ರವೀಣ್‌ ನೆರಿಯ, ಸೋಮಶೇಖರ ಪೈಕ, ಪ್ರಮೋದ್‌,ಪೂವಪ್ಪ, ನವೀನ್ ಎಲಿಮಲೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಅವಧಿಯಲ್ಲಿ ಸೋಮಶೇಖರ ಪೈಕ ರವರು ಅಧ್ಯಕ್ಷರಾಗಿದ್ದು ಇದೀಗ ತೆರವಾದ ಸ್ಥಾನಕ್ಕೆ ಶ್ರೀಕಾಂತ್‌ ರವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Maharashtra: ಟೀಚರ್‌ ಅವಮಾನ ಮಾಡಿದರೆಂದು 10 ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

You may also like