Home » ಶೃಂಗೇರಿ ಶಾರದಾ ಪೀಠ : ದೇಗುಲ ಪ್ರವೇಶಕ್ಕೆ 2 ಡೋಸ್ ಲಸಿಕೆ ಕಡ್ಡಾಯ

ಶೃಂಗೇರಿ ಶಾರದಾ ಪೀಠ : ದೇಗುಲ ಪ್ರವೇಶಕ್ಕೆ 2 ಡೋಸ್ ಲಸಿಕೆ ಕಡ್ಡಾಯ

by Praveen Chennavara
0 comments

ಶೃಂಗೇರಿ, ಡಿ. 16: ಕೊರೊನಾ ಹಿನ್ನೆಲೆಯಲ್ಲಿ ದಕ್ಷಿಣಾಮ್ನಾಯ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಭಕ್ತರ ಪ್ರವೇಶಕ್ಕೆ ಹೊಸ ನಿಯಮ ಜಾರಿ ಮಾಡಲಾಗಿದ್ದು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.

ಭಕ್ತರು ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸಿದ ಬಳಿಕ ದೇವಾಲಯ ಆವರಣ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ.

ಅಲ್ಲದೆ ದೇವಳ ಪ್ರವೇಶಿಸುವವರು ತಮ್ಮ ಸಂಪೂರ್ಣ ವಿವರಗಳನ್ನು ಪ್ರವೇಶ ದ್ವಾರದಲ್ಲಿ ನೊಂದಾಯಿಸಿದ ಬಳಿಕವೇ ಅನುಮತಿ ನೀಡಲಾಗುತ್ತಿದೆ.ಇದಕ್ಕಾಗಿ ಯಾವುದಾದರೊಂದು ಐಡಿ ಪ್ರೂಫ್ ನೀಡಬೇಕು.

You may also like

Leave a Comment