Home » ಸುಳ್ಯ:ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ತೆರಳಿ ಇನ್ನೇನು ಮನೆ ತಲುಪುತ್ತೇವೆನ್ನುವಷ್ಟರಲ್ಲಿ ನಡೆದೇ ಹೋಯಿತು ಅಪಘಾತ!! ಹೃದಯವಿದ್ರಾವಕ ಘಟನೆಯಲ್ಲಿ ದುರಂತ ಅಂತ್ಯ ಕಂಡ ಒಂದು ತಿಂಗಳ ಮಗು!!

ಸುಳ್ಯ:ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ತೆರಳಿ ಇನ್ನೇನು ಮನೆ ತಲುಪುತ್ತೇವೆನ್ನುವಷ್ಟರಲ್ಲಿ ನಡೆದೇ ಹೋಯಿತು ಅಪಘಾತ!! ಹೃದಯವಿದ್ರಾವಕ ಘಟನೆಯಲ್ಲಿ ದುರಂತ ಅಂತ್ಯ ಕಂಡ ಒಂದು ತಿಂಗಳ ಮಗು!!

0 comments

ಸುಳ್ಯ: ಅನಾರೋಗ್ಯಕ್ಕೆ ಈಡಾದ ಒಂದು ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಗೆ ಮರಳುತ್ತಿರುವಾಗ ಅಪಘಾತ ಸಂಭವಿಸಿ ಒಂದು ತಿಂಗಳ ಮಗು ದುರಂತ ಅಂತ್ಯ ಕಂಡ ಘಟನೆ ನಿನ್ನೆ ತಡರಾತ್ರಿ ಬೇಂಗಮಲೆ ಎಂಬಲ್ಲಿ ನಡೆದಿದೆ.

ಘಟನೆ ವಿವರ: ಸುಳ್ಯ ಕಲ್ಮಡ್ಕ ನಿವಾಸಿಗಳಾದ ದಂಪತಿ ತಮ್ಮ ಒಂದು ತಿಂಗಳ ಮಗುವನ್ನು ಅನಾರೋಗ್ಯದ ಕಾರಣದಿಂದಾಗಿ ಆಟೋ ರಿಕ್ಷಾ ಒಂದರಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಅದೇ ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ಬೇಂಗಮಲೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

You may also like

Leave a Comment