3
ಗ್ರಾ.ಪಂ ಮಾಜಿ ಸದಸ್ಯರೊಬ್ಬರು ತಮ್ಮ ಅಂಗಡಿಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಅಡ್ತಲೆಯಲ್ಲಿ ನಡೆದಿದೆ.
ಮರ್ಕಂಜ ಗ್ರಾಮದ ಕಾಯರ ಭೋಜಪ್ಪ (48)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು.
ಭೋಜಪ್ಪ ಅವರು ಅಡ್ತಲೆಯಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದು, ತನ್ನ ಅಂಗಡಿಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮೃತರು ಪತ್ನಿ ಭವಾನಿ, ಪುತ್ರಿ ರಕ್ಷಾ, ಪುತ್ರ ಯತಿನ್ ರನ್ನು ಅಗಲಿದ್ದಾರೆ.
