Home » Sullia : ಮಣ್ಣಿನಡಿಗೆ ಸಿಲುಕಿ ಮೂವರು ಕಾರ್ಮಿಕರ ದುರ್ಮರಣ

Sullia : ಮಣ್ಣಿನಡಿಗೆ ಸಿಲುಕಿ ಮೂವರು ಕಾರ್ಮಿಕರ ದುರ್ಮರಣ

by Praveen Chennavara
0 comments
Sullia

Sullia :ಸುಳ್ಯದಲ್ಲಿ ಬರೆ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸುಳ್ಯ (sullia) ದ ಅಲೆಟ್ಟಿ ರಸ್ತೆಯಲ್ಲಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಹಿಂದುಗಡೆಯಿದ್ದ ದೊಡ್ಡ ಬರೆ ಜರಿದು ಕಾರ್ಮಿಕರ ಮೇಲೆ ಬಿದ್ದಿದೆ.

ಈ ದುರ್ಘಟನೆಯಲ್ಲಿ ಇಬ್ಬರು ಗಂಡಸರು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅಗ್ನಿ ಶಾಮಕ ಸಿಬ್ಬಂದಿಗಳು ಮತ್ತು ಪೊಲೀಸರ ನಿರಂತರ ಶ್ರಮದಿಂದಾಗಿ ಮಹಿಳೆ, ಓರ್ವ ಪುರುಷನ ಮೃತ ದೇಹವನ್ನು ಹೊರ ತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಸಚಿವ ಎಸ್. ಅಂಗಾರ ಆಗಮಿಸಿದ್ದಾರೆ.

You may also like

Leave a Comment