Home » ಸುಳ್ಯ : ಬಿಜೆಪಿ ರಾಜ್ಯ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಮಂಡಲ ಪ್ರವಾಸ

ಸುಳ್ಯ : ಬಿಜೆಪಿ ರಾಜ್ಯ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಮಂಡಲ ಪ್ರವಾಸ

by Praveen Chennavara
0 comments

ಸುಳ್ಯ : ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲದ ವಿಶೇಷ ಸಭೆಯು ಶ್ರೀನಿವಾಸ ಪದ್ಮಾವತಿ ಸಭಾಭವನ ಶ್ರೀವೆಂಕಟರಮಣದೇವರ ಮಂದಿರ ಅಂಬಟೆಡ್ಕದಲ್ಲಿ ನಡೆಯಿತು.

ಓಬಿಸಿ ಮೋರ್ಚಾದ ದ. ಕ ಜಿಲ್ಲಾಧ್ಯಕ್ಷರಾದ ಆರ್.ಸಿ.ನಾರಾಯಣರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ರಾಜ್ಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ವಿವೇಕಾನಂದ ಡಬ್ಬಿಯಾವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ OBC ಯ ಕಾರ್ಯಕರ್ತರು ಸಹಕರಿಸಬೇಕೆಂದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಯಾದ ವಿಠ್ಠಲ್ ಪೂಜಾರಿ ಐರೋಡಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜವಾಗಲ್ ಕೃಷ್ಣ ಮೂರ್ತಿ, ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಕಣೆಮರಡ್ಕ ,ಜಿಲ್ಲಾ ಕಾರ್ಯದರ್ಶಿಯವರಾದ ಭರತ್ ಸೂಟರ್ಪೇಟೆ,ನಗರಸಭೆ ಅಧ್ಯಕ್ಷರಾದ ವಿನಯ್ ಕಂದಡ್ಕ ,ಮಂಡಲ ಪ್ರಧಾನಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ಮತ್ತು ಸುಬೋದ್ ಶೆಟ್ಟಿ ,ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ಜೋಗಿ ಮತ್ತು ಮೋನಪ್ಪ ದೇವಸ್ಯ, ಓಬಿಸಿ ಜಿಲ್ಲಾ ಕಾರ್ಯದರ್ಶಿ ಉದಯಕುಮಾರ್, ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಓಬಿಸಿ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಪನೆ,
ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಕೇರ್ಪಳ ನವೀನ್ ಸಾರಕೆರೆ ಹಾಗೂ ಜಿಲ್ಲಾ ಓಬಿಸಿ ಪದಾಧಿಕಾರಿಗಳು ಮತ್ತು ಮಂಡಲದ ಪ್ರಮುಖರು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಓಬಿಸಿಯ ಮಹಿಳಾ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸುದರ್ಶನ್ ಪಾತಿಕಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು

You may also like

Leave a Comment