Home » ಸುಳ್ಯ: ತರಕಾರಿ ಅಂಗಡಿಗೆ ಬಂದಿದ್ದ ಹಿಂದೂ ಮಹಿಳೆಯೊಂದಿಗೆ ಅಸಭ್ಯ ವರ್ತನೆ!! ಠಾಣೆ ಮೆಟ್ಟಿಲೇರಿದ ಪ್ರಕರಣ!??

ಸುಳ್ಯ: ತರಕಾರಿ ಅಂಗಡಿಗೆ ಬಂದಿದ್ದ ಹಿಂದೂ ಮಹಿಳೆಯೊಂದಿಗೆ ಅಸಭ್ಯ ವರ್ತನೆ!! ಠಾಣೆ ಮೆಟ್ಟಿಲೇರಿದ ಪ್ರಕರಣ!??

0 comments

ಸುಳ್ಯ:ತರಕಾರಿ ಅಂಗಡಿಯ ವ್ಯಕ್ತಿಯೊಬ್ಬ ವಿವಾಹಿತ ಹಿಂದೂ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಘಟನೆಯೊಂದು ಸುಳ್ಯದ ತರಕಾರಿ ಅಂಗಡಿಯಲ್ಲೇ ನಡೆದಿದ್ದು, ಸದ್ಯ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

ಕಳೆದ ಸಂಜೆ ವೇಳೆಗೆ ಇಲ್ಲಿನ ಪೋಸ್ಟ್ ಆಫೀಸ್ ಬಳಿಯಲ್ಲಿರುವ ತರಕಾರಿ ಅಂಗಡಿಗೆ ವಿವಾಹಿತ ಹಿಂದೂ ಮಹಿಳೆಯೊಬ್ಬರು ತರಕಾರಿ ಖರೀದಿಗೆ ಆಗಮಿಸಿದ್ದು,ಈ ವೇಳೆ ತರಕಾರಿ ಅಂಗಡಿಯ ವ್ಯಾಪಾರಿ ಅನ್ಯಕೋಮಿನ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ.

ಕೂಡಲೇ ಮಹಿಳೆ ಪ್ರತಿಭಟಿಸಿದ್ದು, ಮಹಿಳೆ ಆತನಿಗೆ ಎಚ್ಚರಿಕೆ ಕೊಡುವ ಮಾತನ್ನು ಕೇಳಿದ ಸ್ಥಳೀಯರು ಆಗಮಿಸಿದ್ದು,ಸ್ಥಳದಲ್ಲಿ ಜನ ಸೇರಲು ಪ್ರಾರಂಭವಾಯಿತು ಎನ್ನಲಾಗಿದೆ. ಬಳಿಕ ಆತನಿಗೆ ಪೊಲೀಸ್ ದೂರು ದಾಖಲಿಸುವ ಎಚ್ಚರಿಕೆ ನೀಡಿ ಸ್ಥಳದಿಂದ ಮರಳಿದ್ದು, ಸದ್ಯ ಪ್ರಕರಣ ಸುಳ್ಯ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಈ ಬಗ್ಗೆ ಆರೋಪಿತ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಳ್ಳಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

You may also like

Leave a Comment