Home » ಉಪ್ಪಿನಂಗಡಿ:ಯುವಕರ ಮೇಲೆ ತಲವಾರು ದಾಳಿ ಐದು ಮಂದಿ ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ:ಯುವಕರ ಮೇಲೆ ತಲವಾರು ದಾಳಿ ಐದು ಮಂದಿ ಆಸ್ಪತ್ರೆಗೆ ದಾಖಲು

0 comments

ಉಪ್ಪಿನಂಗಡಿ: ಯುವಕರ ಮೇಲೆ ಗುಂಪೊಂದು ತಲವಾರು ದಾಳಿ ನಡೆಸಿದ ಘಟನೆ ಡಿ.5ರ ಸಂಜೆ ಇಳಂತಿಲ ಗ್ರಾಮದ ಅಂಡೆತಡ್ಕದಲ್ಲಿ ನಡೆದಿದೆ.

ಇಲ್ಲಿನ ಅಂಗಡಿಯೊಂದರ ಬದಿಯಲ್ಲಿ ಸುಮಾರು 7 ಗಂಟೆಗೆ ಸ್ಥಳೀಯ ನಿವಾಸಿಗಳಾದ ಫಯಾಝ್ (26ವ.) ಹಾಗು ಆಫೀಝ್ (19ವ.) ಎಂಬವರು ಕುಳಿತುಕೊಂಡಿದ್ದ ವೇಳೆ ಅಲ್ಲಿಗೆ ಬಂದ 4-5 ಮಂದಿಯಿದ್ದ ತಂಡ ಏಕಾಏಕಿ ತಲವಾರು ದಾಳಿ ನಡೆಸಿದ್ದಾರೆ. ಗಾಯಗೊಂಡ ಫಯಾಝ್ ಹಾಗೂ ಆಫೀಜ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಳಿಕದ ಬೆಳವಣಿಗೆಯಲ್ಲಿ

ರಾತ್ರಿ ಸುಮಾರು 8.30ರ ವೇಳೆಗೆ 30-40 ಮಂದಿ ಬೈಕ್‌ಗಳಲ್ಲಿ ಬಂದಿದ್ದು ಅಂಗಡಿಯಲ್ಲಿ ಕುಳಿದುಕೊಂಡಿದ್ದ ಸಿದ್ದೀಕ್, ಅಯೂಬ್, ಝಕರಿಯಾ ಎಂಬವರ ಮೇಲೆ ತಲವಾರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಗಾಯಾಳುಗಳು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಕಾರಣ ತಿಳಿದುಬ೦ದಿಲ್ಲ.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

You may also like

Leave a Comment