Bengaluru Murder: ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಚಾಕು ಇರಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಎಂಬವರನ್ನು ಕೊಲೆ (Bengaluru Murder)ಮಾಡಲಾಗಿದೆ.
ಪ್ರತಿಮಾ (Prathima) ಕಳೆದ 8 ವರ್ಷಗಳಿಂದ ಒಬ್ಬರೇ ಈ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು.ನಿನ್ನೆ ರಾತ್ರಿ 8.30 ವೇಳೆಗೆ ಹತ್ಯೆ ನಡೆದಿದೆ ಎನ್ನಲಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ ಮೂಲದವರಾದ ಪ್ರತಿಮಾ ಬೆಂಗಳೂರಿನಲ್ಲಿ ಸೀನಿಯರ್ ಜುವಾಲಜಿಸ್ಟ್ ವಿಭಾಗದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪಾರ್ಟ್ಮೆಂಟ್ ಒಂದರಲ್ಲಿ ಒಬ್ಬರೇ ನೆಲೆಸಿದ್ದ ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. ರಾತ್ರಿ ಕಛೇರಿಯಿಂದ 8 ಗಂಟೆಗೆ ಮನೆ ಬಳಿ ಡ್ರೈವರ್ ಬಿಟ್ಟು ಹೋದ ಬಳಿಕ ರಾತ್ರಿ ಪ್ರತಿಮಾಗೆ ಅವರ ಅಣ್ಣ ಕರೆ ಮಾಡಿದ್ದಾರೆ. ಆದರೆ ಪ್ರತಿಮಾ ಕರೆ ಸ್ವೀಕರಿಸಲಿಲ್ಲ.
ಬಿಬಿಎಂಪಿಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಮಾ ಪ್ರತೀಶ್ ಬನ್ನೇರುಘಟ್ಟ ರೋಡ್ ಬಳಿ ನೆಲೆಸಿದ್ದರು. ಸ್ವಿಚ್ಆಫ್ ಬಂದ ಹಿನ್ನಲೆ ಕೆಳಗಡೆ ವಾಸವಿದ್ದ ಮನೆಯವರಿಗೆ ಒಮ್ಮೆ ಹೋಗಿ ನೋಡುವಂತೆ ತಿಳಿಸಿದ್ದಾರೆ. ಅದೇ ರೀತಿ ಬಾಡಿಗೆ ಮನೆಯವರು ಹೋಗಿ ಕಿಟಕಿಯಲ್ಲಿ ನೊಡಿದಾಗ ಘಟನೆ ಬೆಳಕಿಗೆ ಬಂದಿದೆ. ನವೆಂಬರ್ 05 ರಂದು (ಇಂದು)ಬೆಳಿಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕಳೆದ 18 ವರ್ಷಗಳ ಹಿಂದೆ ಪ್ರತಿಮಾ ಹಾಗೂ ಸತ್ಯನಾರಾಯಣ ವಿವಾಹವಾಗಿದ್ದರು ಎನ್ನಲಾಗಿದೆ. ತೀರ್ಥಹಳ್ಳಿಯ ತುಡುಕಿ ಗ್ರಾಮದಲ್ಲಿ ಗಂಡ ಮತ್ತು ಮಗ ನೆಲೆಸಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ 8 ಗಂಟೆಗೆ ಕಛೇರಿಯಿಂದ ಮನೆಗೆ ಚಾಲಕ ಡ್ರಾಪ್ ಮಾಡಿ ತೆರಳಿದ ಬಳಿಕ ಹಂತಕರು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ, ಡಿಸಿಪಿ ಹಾಗೂ ವಿಶೇಷ 3 ತಂಡಗಳು ಸೇರಿಕೊಂಡು ತನಿಖೆ ನಡೆಸುತ್ತಿದ್ದಾರೆ.
2017ರಲ್ಲಿ ರಾಮನಗರದಲ್ಲೂ ಕೂಡ ಸುಮಾರು 3 ವರ್ಷ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಬಳಿಕ ಬೆಂಗಳೂರು ಸೌತ್ಗೆ ವರ್ಗಾವಣೆಯಾಗಿದ್ದರು. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ ಅವರನ್ನು ದುಷ್ಕರ್ಮಿಗಳು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಇನ್ನು ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗದ ಹಿನ್ನೆಲೆ ಇದೊಂದು ಪ್ರೀ ಪ್ಲಾನ್ಡ್ ಎನ್ನುವಂತೆ ಕಾಣುತ್ತದೆ. ಇದರ ಜೊತೆಗೆ ಪರಿಚಿತರಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರತಿಮಾ ಲಂಚ್ ಬಾಕ್ಸ್ ಇಟ್ಟು ಬಾಗಿಲು ತೆರೆಯುತ್ತಿದ್ದಂತೆ ಹಂತಕನಿಂದ ಅಟ್ಯಾಕ್ ಆಗಿರುವ ಶಂಕೆ ವ್ಯಕ್ತವಾಗಿದೆ. ಮನೆಗೆ ಅಳವಡಿಸಿದ್ದ ಗ್ರಿಲ್ ಡೋರ್ ಓಪನ್ ಮಾಡಿ ವುಡ್ ಡೋರ್ ಓಪನ್ ಮಾಡಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಪ್ರತಿಮಾ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕಿರುಚದಂತೆ ನೋಡಿಕೊಂಡಿದ್ದು, ಆ ಬಳಿಕ ರೂಂನೊಳಗೆ ಎಳೆದೊಯ್ದು ಹಿಂಬದಿಯಿಂದ ಪ್ರತಿಮಾಳ ಕುತ್ತಿಗೆ ಕೊಯ್ದು ಅಧಿಕಾರಿಯನ್ನು ಹತ್ಯೆ ಮಾಡಿದ್ದಾನೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ತನಿಖೆಯ ಬಳಿಕವಷ್ಟೇ ಅಸಲಿ ವಿಚಾರ ಹೊರ ಬೀಳಬೇಕಾಗಿದೆ.
