Home » Traffic date: ಬೆಂಗಳ್ರೂರ್ ಟ್ರಾಫಿಕ್ ಗೆ ಬಾ, ಡೇಟ್ ಮಾಡಾಣ ಇಲ್ಲ ಪ್ರೀತಿ ಮಾಡಾಣ ? ಎಂದ ಯುವತಿ, ಇಲ್ಲಿದೆ ನೋಡಿ ಮ್ಯಾಟರ್ ವಿಷ್ಯ !!

Traffic date: ಬೆಂಗಳ್ರೂರ್ ಟ್ರಾಫಿಕ್ ಗೆ ಬಾ, ಡೇಟ್ ಮಾಡಾಣ ಇಲ್ಲ ಪ್ರೀತಿ ಮಾಡಾಣ ? ಎಂದ ಯುವತಿ, ಇಲ್ಲಿದೆ ನೋಡಿ ಮ್ಯಾಟರ್ ವಿಷ್ಯ !!

5 comments
Traffic date

Traffic Date: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್(Bengaluru traffic)ಹೇಗಿರುತ್ತೆ ಎಂಬುದನ್ನೂ ವಿವರಿಸುವ ಅಗತ್ಯವಿಲ್ಲ. ಮನೆಯಿಂದ ಕಾಲೇಜಿಗೆ, ಆಫೀಸ್ ಗೆ ತೆರಳಲು ಗಂಟೆಗಟ್ಟಲೇ ಟ್ರಾಫಿಕ್ ನಿಂದ ಕಾಯಬೇಕಾಗುತ್ತದೆ. ಎಷ್ಟೋ ಮಂದಿಗೆ ಟ್ರಾಫಿಕ್ ಸಮಸ್ಯೆಯಿಂದ ಸರಿಯಾಗಿ ನಿದ್ದೆ ಮಾಡಲು ಸಮಯ ಸಿಗುವುದಿಲ್ಲ.ಈ ನಡುವೆ, ಯುವತಿಯೊಬ್ಬಳು ಈ ಟ್ರಾಫಿಕ್ ಡೇಟ್ (Traffic Date)ಎಂಬ ಕಾನ್ಸೆಪ್ಟ್ ಬಗ್ಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಕೃತಿ ಎಂಬ ಯುವತಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಂಚಲನ ಮೂಡಿಸಿದ್ದು, ಡೇಟಿಂಗ್ ಮಾಡಲು, ಪ್ರೀತಿಯನ್ನು ಕಂಡುಕೊಳ್ಳಲು ಬೆಂಗಳೂರು ಟ್ರಾಫಿಕ್ ಬೆಸ್ಟ್ ಎಂಬ ಸಲಹೆಯನ್ನು ನೀಡಿದ್ದಾರೆ. “ಮೊದಲು ಭೇಟಿಯಾಗಲು ಪ್ರಯತ್ನಿಸಿ ಮತ್ತು ಟ್ರಾಫಿಕ್ ಹೆಚ್ಚಿರುವಾಗ ನಿಮ್ಮ ನೆಚ್ಚಿನ ಸ್ಥಳಕ್ಕೆ ಜೊತೆಯಾಗಿ ಪ್ರಯಾಣ ಮಾಡುವ ಮೂಲಕ ನೀವು ಜೊತೆಯಾಗಿ ಹೆಚ್ಚು ಸಮಯವನ್ನು ಕಳೆಯಬಹುದು. ಬೆಂಗಳೂರು ಟ್ರಾಫಿಕ್ ನಲ್ಲಿ ಕಾಲ ಕಳೆದಾಗ, ಆ ವ್ಯಕ್ತಿಗೆ ಕೋಪ ಎಷ್ಟಿದೆ ಎಂಬುದನ್ನೂ ತಿಳಿಯಬಹುದು” ಎಂದು ಪ್ರಕೃತಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಟ್ರಾಫಿಕ್ನಲ್ಲಿ ತಗಲಾಕಿಕೊಂಡಾಗ ಎಂತಹ ವ್ಯಕ್ತಿಯಾಗಿದ್ದರು ಕೂಡ ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ನಿಮ್ಮೊಂದಿಗೆ ಡೇಟಿಂಗ್ಗೆ ಬಂದ ವ್ಯಕ್ತಿ ನಿಮಗಾಗಿ ಆ ಟ್ರಾಫಿಕ್ನಲ್ಲಿಯೂ ಎಷ್ಟು ತಾಳ್ಮೆಯಿಂದ ಇರಲು ಸಾಧ್ಯ ಎಂಬುದನ್ನು ತಿಳಿಯಬಹುದು.ಈ ಸಂದರ್ಭ ಕೋಪವನ್ನು ನಿಯಂತ್ರಿಸಲಾಗದೇ, ಆ ಕೋಪವನ್ನು ಅವರು ಹೊರಗೆ ಹಾಕಬಹುದು. ಅವರ ಕೋಪ-ತಾಳ್ಮೆ ನಿಮಗೆ ಅವರು ಸೂಕ್ತ ಸಂಗಾತಿಯಾಗಬಲ್ಲರೇ?? ಅವರನ್ನು ನೀವು ಪ್ರೀತಿಸಬಹುದೇ ಎಂಬುದನ್ನು ತಿಳಿದುಕೊಳ್ಳಲು ಸಹಕರಿಸುತ್ತದೆ ಎಂಬುದು ಯುವತಿಯ ಸಲಹೆಯಾಗಿದೆ.

“ಸ್ಥಳವನ್ನು ತಲುಪುವುದಕ್ಕಿಂತ ಹೇಗೆ ಭೇಟಿಯಾಗುವುದು ಎಂಬುದೇ ದೊಡ್ಡ ವಿಚಾರ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. “ಇದು ನಿಜಕ್ಕೂ ಉತ್ತಮ ಸಲಹೆ” ಎಂದು ಒಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್ ಗೆ ತರಹೇವಾರಿ ಕಾಮೆಂಟ್ಸ್ ಗಳು ಬರುತ್ತಿವೆ. ಅಕ್ಟೋಬರ್ 6 ರಂದು ಈ ಟ್ವೀಟ್ ಮಾಡಲಾಗಿದ್ದು 1.4 ಲಕ್ಷಕ್ಕೂ ಅಧಿಕ ಮಂದಿ ಈ ಟ್ವೀಟ್ ನೋಡಿದ್ದಾರೆ.

 

ಇದನ್ನು ಓದಿ: Assembly election : ಮುಂದಿನ ವರ್ಷ ರಾಜ್ಯದಲ್ಲಿ ಮತ್ತೆ ನಡೆಯಲಿದೆ ವಿಧಾನಸಭಾ ಚುನಾವಣೆ ?!

You may also like

Leave a Comment