Home » ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ!! ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ಭೇಟಿ

ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ!! ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ಭೇಟಿ

0 comments

ಬೆಂಗಳೂರು: ಅತ್ಯಾಚಾರವೆಸಗಿ ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿ ಸ್ಥಳೀಯರನ್ನು ಆತಂಕಕ್ಕೆ ಎಡೆಮಾಡಿದ ಘಟನೆಯೊಂದು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರ ಬಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಕೃತ್ಯ ಎಸಗಿದ ಆರೋಪಿಗಳು ಮೃತದೇಹದ ಗುರುತು ಪತ್ತೆಯಾಗಬಾರದೆಂದು ಮುಖ ಸಹಿತ ದೇಹದ ಕೆಲ ಭಾಗಗಳನ್ನು ಸುಟ್ಟು ಹಾಕಿ ವಿಕೃತಿ ಮೆರೆದಿದ್ದಾರೆ. ಮೃತ ಮಹಿಳೆ ಅಪರಿಚಿತಳಾಗಿದ್ದು, ಸುಮಾರು 30-35 ವರ್ಷ ಪ್ರಾಯವಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಇದೊಂದು ಅತ್ಯಾಚಾರ ಹಾಗೂ ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದ್ದು,ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

You may also like

Leave a Comment