Home » ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ನಿರ್ವಾಹಕ ಸಜಿವ ದಹನ,ಚಾಲಕ ಪಾರು

ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ನಿರ್ವಾಹಕ ಸಜಿವ ದಹನ,ಚಾಲಕ ಪಾರು

by Praveen Chennavara
0 comments

Bengalore fire accident :ಬೆಂಗಳೂರು : ಬಿಎಂಟಿಸಿ ಬಸ್‌ನಲ್ಲಿ ಇಂದು ಬೆಳಗಿನ ಜಾವ 4.45ಕ್ಕೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು (Bengalore fire accident), ಬಸ್‌ನಲ್ಲಿ ಮಲಗಿದ್ದ ನಿರ್ವಾಹಕ ಸಜೀವ ದಹನಗೊಂಡ ದಾರುಣ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮುತ್ತಯ್ಯಸ್ವಾಮಿ(45) ಮೃತ ನಿರ್ವಾಹಕ. ರಾತ್ರಿ ಕರ್ತವ್ಯ ಮುಗಿಸಿ ಊಟ ಮಾಡಿ ಬಸ್‌ನಲ್ಲಿ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ನಿದ್ದೆಗೆ ಜಾರಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಕಾಶ್ ಶೌಚಾಲಯಕ್ಕೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಪಸ್ ಬರುವಷ್ಟರಲ್ಲಿ ಬಸ್ ಧಗಧಗನೆ ಹೊತ್ತಿ ಉರಿಯುತ್ತಿದ್ದು, ದುರ್ಘಟನೆಯಲ್ಲಿ ನಿರ್ವಾಹಕ ಮುತ್ತಯ್ಯಸ್ವಾಮಿ ಸುಟ್ಟು ಕರಕಲಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಕಂಡಕ್ಟರ್ ಮುತ್ತಯ್ಯಸ್ವಾಮಿ ಮೂಲತಃ ಗದಗ ಜಿಲ್ಲೆಯ ಹಾಲೂರಿನವರು ಎಂದು ತಿಳಿದುಬಂದಿದೆ.

ಘಟನೆಗೆ ಬಿಎಂಟಿಸಿ ಸಂಸ್ಥೆಯು ಆಘಾತ ವ್ಯಕ್ತಪಡಿಸಿದ್ದು, ತೀವ್ರ ಸಂತಾಪ ಸೂಚಿಸಿದೆ. ನಿರ್ವಾಹಕರ ಕುಟುಂಬದವರಿಗೆ ಮಾಹಿತಿ ತಿಳಿಸಲಾಗಿದೆ.

You may also like

Leave a Comment