Home » ಬೆಂಗಳೂರು : ಭೀಕರ ಅಪಘಾತದಲ್ಲಿ ಧಾರವಾಹಿ ನಟಿಯ ಮಗಳ ದಾರುಣ ಸಾವು : ಕಳೆದವಾರವಷ್ಟೇ ‘ ರಿಯಾಲಿಟಿ ಶೋ’ ಒಂದರಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಅಮ್ಮ ಮಗಳು

ಬೆಂಗಳೂರು : ಭೀಕರ ಅಪಘಾತದಲ್ಲಿ ಧಾರವಾಹಿ ನಟಿಯ ಮಗಳ ದಾರುಣ ಸಾವು : ಕಳೆದವಾರವಷ್ಟೇ ‘ ರಿಯಾಲಿಟಿ ಶೋ’ ಒಂದರಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಅಮ್ಮ ಮಗಳು

0 comments

ಬೆಂಗಳೂರಿನ ಕೋಣನಕುಂಟೆ ವಾಜರಹಳ್ಳಿಯಲ್ಲಿ ಇಂದು ಸಂಜೆ ದ್ವಿಚಕ್ರ ವಾಹನದಲ್ಲಿ ತಾಯಿ ಮಗಳು ಪ್ರಯಾಣಿಸುತ್ತಿದ್ದ ಗಾಡಿಯು ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಆರು ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದ, ತಾಯಿ ಅಮೃತ ಮತ್ತು ಮಗಳು ಸಾನ್ವಿ ಕಳೆದ ವಾರ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿದ್ದರಷ್ಟೇ.

ಅಪಘಾತದಲ್ಲಿ ತಾಯಿ ಅಮೃತಾ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.

ಗಾಯಗೊಂಡಿರುವ ಅಮೃತಾ ನಾಯ್ಡು ಅವರು ಕಳೆದ ಹಲವು ವರ್ಷಗಳಿಂದ ಕನ್ನಡದ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ.

ಕುಮಾರಸ್ವಾಮಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment