5
Bengaluru : ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮದುವೆ ಬಸ್ ಪಲ್ಟಿಯಾಗಿದ ಘಟನೆಯೊಂದು ನಡೆದಿದೆ.
ನಿನ್ನೆ ರಾತ್ರಿ ಮದುವೆ ಮುಗಿಸಿಕೊಂಡು ತೆರಳುವಾಗ ಈ ದುರ್ಘಟನೆ ನಡೆಸಿದೆ. ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬಂದಿದ್ದ ಬಸ್ ಇದಾಗಿತ್ತು. ಚಾಲಕ ನಿಯಂತ್ರಣ ತಪ್ಪಿ ವೃದ್ಧೆಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹನುಮಕ್ಕ(65), ಲಕ್ಷ್ಮೀದೇವಮ್ಮ (55), ಹನುಮಯ್ಯ (71) ಗಾಯಗೊಂಡಿದ್ದಾರೆ. ಸಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Viral Video: ಬಾಯಾರಿದ ಜಿಂಕೆ, ಹಸಿದು ಹೊಂಚು ಹೂಡಿ ಹಾರಿದ ಮೊಸಳೆ: ಝುಂ ಅನ್ನಿಸೋ ಕುತೂಹಲದ ಮಧ್ಯೆ ಗೆದ್ದವರು ಯಾರು ?
