Home » ಡಬಲ್ ಮರ್ಡರ್ ಗೆ ಬೆಚ್ಚಿದ ಬೆಂಗಳೂರು!! ಮನೆ ಮುಂದೆಯೇ ಯುವತಿ ಸಹಿತ ಮಾಜಿ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ!!

ಡಬಲ್ ಮರ್ಡರ್ ಗೆ ಬೆಚ್ಚಿದ ಬೆಂಗಳೂರು!! ಮನೆ ಮುಂದೆಯೇ ಯುವತಿ ಸಹಿತ ಮಾಜಿ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ!!

0 comments

ಬೆಂಗಳೂರು: ಮನೆ ಮುಂದೆಯೇ ಡಬಲ್ ಮರ್ಡರ್ ನಡೆದಿದ್ದು ನಗರದ ಬ್ಯಾಗಡದೇನಹಳ್ಳಿಯ ಮಾಜಿ ಪಂಚಾಯತ್ ಅಧ್ಯಕ್ಷರೋರ್ವರ ಬರ್ಬರ ಹತ್ಯೆಯಾಗಿದೆ. ಸ್ಥಳದಲ್ಲಿ ಇನ್ನೋರ್ವ ಯುವತಿಯ ಮೃತದೇಹವೂ ಪತ್ತೆಯಾಗಿದ್ದು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಆನೇಕಲ್ ತಾಲೂಕಿನ ಸೂರ್ಯನಗರ ಸಿಟಿ ಬಡಾವಣೆಯಲ್ಲಿ ಘಟನೆ ನಡೆದಿದ್ದು,ಮೃತರನ್ನು ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ ಅಲಿಯಾಸ್ ದಾಸ ಹಾಗೂ ಕಾವ್ಯ ಎಂದು ಗುರುತಿಸಲಾಗಿದೆ.

ಮೃತ ಕಾವ್ಯ ತಾಯಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿದ್ದು ಶೀಘ್ರವೇ ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment