Bangalore: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿನ್ನೆ ಸಂಜೆ ಭಾರೀ ಮಳೆರಾಯ ಅಟ್ಟಹಾಸ ಮೆರೆದಿದ್ದು, ಅನೇಕ ಭಾಗಗಳಲ್ಲಿ ಅನಾಹುತವೇ ಸೃಷ್ಟಿಯಾಗಿದೆ.
ನ್ನೆ ಸುರಿದ ಭಾರೀ ಮಳೆಗೆ ಮಲ್ಲೇಶ್ವರಂನ ನಿಹಾನ್ ಜ್ಯುವೆಲ್ಲರಿ ಶಾಪ್ಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಶಾಪ್ನಲ್ಲಿದ್ದ ಆಭರಗಳಲ್ಲಿ ಅರ್ಧಕ್ಕೆಅರ್ಧ ಕೊಚ್ಚಿ ಕೊಂಡು ಹೋಗಿದ್ದು, ಮಳಿಗೆ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ದಿಢೀರ್ ಸುರಿದ ಮಳೆಯಿಂದಾಗಿ ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ, 50 ಸಾವಿರ ಹಣ ಜ್ಯುವೆಲ್ಲರಿ ಶಾಪ್ನ ಹಿಂಭಾಗದ ಬಾಗಿಲ ಮೂಲಕ ಕೊಚ್ಚಿಕೊಂಡು ಹೋಗಿವೆ, ಚಿನ್ನ, ಬೆಳ್ಳಿ, ರೋಲ್ಗೋಲ್ಟ್ ಸೇರಿದಂತಹ ಆಭರಣಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ನೀರು ತುಂಬಿದಾಗ ಕಾಲ್ ಮಾಡಿ ಬಿಬಿಎಂಪಿ ಅಧಿಕಾರಿಗಳಿಗೆ ಸಹಾಯ ಮಾಡಲು ಮನವಿ ಮಾಡಿದ್ರೂ ಯಾರೋಬ್ಬರು ಸಹಾಯಕ್ಕೆ ಬಂದಿಲ್ಲ, ಸುಮಾರು ಎರಡು ಕೋಟಿ ವೆಚ್ಚದ ಆಭರಣ, ಫರ್ನಿಚರ್ಸ್ ಹಾನಿಯಾಗಿದೆ ಎಂದು ತಮ್ಮ ಆಳಲು ತೋಡಿಕೊಂಡಿದ್ದಾರೆ. ಭಾರೀ ಮಳೆಯಿಂದಾಗಿ ಪವರ್ ಕಟ್ ಆಗಿದ್ದು ಏನೆಲ್ಲ ಆಗಿದೆ ಎಂದುದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಷ್ಟವನ್ನು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಿನ (Bangalore) ಕೆಆರ್ ಸರ್ಕಲ್ ಅಂಡರ್ ಪಾಸ್ನಲ್ಲಿ ಕಾರು ಮುಳುಗಡೆಗೊಂಡು ಟೆಕ್ಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಿನ್ನೆ ಇನ್ನೂ ಅನೇಕ ಕಡೆಗಳಲ್ಲಿ ಹಲವು ಅನಾಹುತವಾಗಿದ್ದು ,ಹೊಸ ಸರ್ಕಾರ ರಚನೆಯಾಗಿದ್ರೂ. ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಚೂಚನೆ ನೀಡಿದ್ರೂ ಯಾವುದೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ.
ಇದನ್ನು ಓದಿ: Alok Mohan: ನೂತನ ಡಿಜಿ, ಐಜಿಪಿಯಾಗಿ `ಅಲೋಕ್ ಮೋಹನ್’ ಅಧಿಕಾರ ಸ್ವೀಕಾರ
