Home » SSLC ವಿದ್ಯಾರ್ಥಿಗಳೇ ಗಮನಿಸಿ | ಡ್ರಾಯಿಂಗ್‌ ಗ್ರೇಡ್‌ ಪರೀಕ್ಷೆ ಅರ್ಜಿ ದಿನಾಂಕ ವಿಸ್ತರಣೆ | ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿಯಿಂದ ಸುತ್ತೋಲೆ

SSLC ವಿದ್ಯಾರ್ಥಿಗಳೇ ಗಮನಿಸಿ | ಡ್ರಾಯಿಂಗ್‌ ಗ್ರೇಡ್‌ ಪರೀಕ್ಷೆ ಅರ್ಜಿ ದಿನಾಂಕ ವಿಸ್ತರಣೆ | ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿಯಿಂದ ಸುತ್ತೋಲೆ

0 comments

ಕನಾಟಕ ಪರೀಕ್ಷಾ ಮಂಡಳಿಯು ನವೆಂಬರ್ -2022ರ ತಿಂಗಳಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ನೋಂದಾಯಿಸುವ ದಿನಾಂಕವನ್ನು ವಿಸ್ತರಿಸಿ ಸುತ್ತೋಲೆಯನ್ನು ಹೊರಡಿಸಿದೆ. ನವೆಂಬರ್ -2022ರ ತಿಂಗಳಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ನೋಂದಾಯಿಸಲು ದಿನಾಂಕ 25-08-2022 ರಿಂದ 25-09-2022ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು ಎಂಬ ಬಗ್ಗೆ ಸುತ್ತೋಲೆ ಹೊರಡಿಸಿತ್ತು ಕರ್ನಾಟಕ ಪರೀಕ್ಷಾ ಮಂಡಳಿ.

ಆದರೆ ಪೋಷಕರಿಂದ, ಹಾಗೂ ರಾಜ್ಯದ ಕೆಲವು ಪರೀಕ್ಷಾ ಕೇಂದ್ರಗಳಿಂದ ಮಂಡಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲು ಕೋರಿಕೆಗಳು ಬಂದ ಹಿನ್ನಲೆಯಲ್ಲಿ ಆನ್‌ಲೈನ್‌ ಅರ್ಜಿಗಳನ್ನು ನೋಂದಾಯಿಸುವ ಹಾಗೂ ಪ್ರಸ್ತಾವನೆಯನ್ನು ಸಲ್ಲಿಸುವ ದಿನಾಂಕಗಳನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ಮಂಡಳಿ ಜಾಲತಾಣದ Center Login ಮೂಲಕ ಅಭ್ಯರ್ಥಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಅಂತಿಮ ದಿನಾಂಕ – 28-09-2022.
ಮಂಡಳಿ ಜಾಲತಾಣದ Center Login ಮೂಲಕ ಅಭ್ಯರ್ಥಿಗಳು ಪರಿಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವುದಕ್ಕೆ ದಿನಾಂಕ- 29-09-2022 ರಿಂದ 03-10-2022ರ ವರೆಗೆ.

ಉಳಿದಂತೆ ದಿನಾಂಕ 28-09-2022 ರ ಅಧಿಸೂಚನೆಯಲ್ಲಿ ನಿಗಧಿಪಡಿಸಿರುವ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆದುದರಿಂದ ನಿಗಧಿಪಡಿಸಿರುವ ದಿನಾಂಕಗಳ ಪ್ರಕಾರ ವಿದ್ಯಾರ್ಥಿಗಳಿಂದ ಶುಲ್ಕ ಸ್ವೀಕರಿಸಿ, ಆನ್‌ಲೈನ್ ಮೂಲಕ ಅರ್ಜಿಗಳನ್ನು ನೋಂದಣಿ ಮಾಡಲು ಹಾಗೂ ಶುಲ್ಕ ಸ್ವೀಕರಿಸಲು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತಂದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಬಂಧಿಸಿದ ಜಿಲ್ಲಾ ಡಯಟ್‌ ಪ್ರಾಂಶುಪಾಲರುರವರು ಅಗತ್ಯ ಕ್ರಮಕೈಗೊಳ್ಳಬೇಕೆಂದು ಈ ಮೂಲಕ ತಿಳಿಸಿದೆ.

You may also like

Leave a Comment