Murder Case: ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ಎರಡು ಗುಂಪುಗಳ ನಡುವಿನ ಜಗಳ ಉಂಟಾಗಿ ಕೊನೆಗೆ ಒಬ್ಬನ ಕೊಲೆಯಲ್ಲಿ (Murder Case) ಜಗಳ ಕೊನೆಗೊಂಡಿದೆ. ಸದ್ಯ ಈ ಪ್ರಕರಣ ಆಡುಗೋಡಿ ಪೊಲೀಸ್ ಠಾಣೆಯಲ್ಲಿ (crime news) ದಾಖಲಾಗಿದೆ. ಲಾಂಗ್ ಮಚ್ಚುಗಳಿಂದ ಎರಡೂ ಗುಂಪುಗಳು ಹೊಡೆದಾಟ (Gang war) ಮಾಡಿಕೊಂಡಿದ್ದು, ಶ್ರೀನಿವಾಸ್ ಎನ್ನುವ ವ್ಯಕ್ತಿ ಕೊಲೆಯಾಗಿದ್ದಾನೆ.
ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನಾ ಸಮಯದಲ್ಲಿಯೂ ಡ್ಯಾನ್ಸ್ ವಿಚಾರವಾಗಿ ಗಲಾಟೆಯಾಗಿತ್ತು. ಅಂದು ಶ್ರೀನಿವಾಸ್ ಕಡೆಯವರಿಗೆ ವಿರೋಧಿಗಳ ಗುಂಪು ನೀವು ಇಲ್ಲಿ ಡ್ಯಾನ್ಸ್ ಮಾಡಬೇಡಿ ಎಂದು ವಾರ್ನ್ ಮಾಡಿದ್ದರು. ನಿನ್ನೆ ಶ್ರೀನಿವಾಸ್ ವಿರೋಧಿಗಳ ಗುಂಪಿನ ಏರಿಯಾದಲ್ಲಿ ಗಣಪತಿ ಬಿಡುವಾಗ ಶ್ರೀನಿವಾಸ್ ಗುಂಪಿನವರು ಡ್ಯಾನ್ಸ್ ಮಾಡಿದ್ದರು.
ಈ ವೇಳೆ ಗಲಾಟೆ ಶುರುವಾಗಿದೆ. ಗಣಪತಿ ಮೆರವಣಿಗೆ ವೇಳೆ ಈ ಗಣೇಶ ಬಲಿ ಕೇಳುತ್ತೆ ಎಂದು ವಿರೋಧಿಗಳು ಕೂಗಿದ್ದು, ಆ ವೇಳೆ ಮೃತ ಶ್ರೀನಿವಾಸ್ ಮತ್ತು ಆರೋಪಿಗಳ ನಡುವೆ ಗಲಾಟೆ ಶುರುವಾಗಿದೆ. ಸಿದ್ಧತೆ ಮಾಡಿಕೊಂಡು ಬಂದಿದ್ದ ಗುಂಪುಗಳು ಲಾಂಗು ಮಚ್ಚುಗಳಿಂದ ಹೊಡೆದಾಡಿವೆ.
ಜಗಳವಾದ ಸಮಯದಲ್ಲಿ ಶ್ರೀನಿವಾಸ್‌ಗೆ ಚಾಕುವಿನಿಂದ ಇರಿಯಲಾಗಿದೆ. ಗಲಾಟೆಯಲ್ಲಿ ರಂಜಿತ್ ಎನ್ನುವವನಿಗೂ ಗಂಭೀರ ಗಾಯವಾಗಿದೆ. ಗಲಾಟೆ ಬಿಡಿಸಲು ಬಂದ ಮೃತ ಶ್ರೀನಿವಾಸ್ ತಾಯಿಗೂ ಗ್ಯಾಂಗ್ ಇರಿದಿದೆ. ಗಾಯಳುಗಳಿಗೆ ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪೊಲೀಸ್ ಮಾಹಿತಿ ಪ್ರಕಾರ, ಗಲಾಟೆ ಸಂದರ್ಭದಲ್ಲಿ ಒಬ್ಬ ರೌಡಿಶೀಟರ್ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸರು ಆರೋಪಿಗಳಿಗೆ ಹುಡುಕಾಡುತ್ತಿರುವುದಾಗಿ ಆಗ್ನೇಯ ಡಿಸಿಪಿ ಸಿಕೆ ಬಾಬಾ ಮಾಹಿತಿ ನೀಡಿದ್ದಾರೆ.
