Home » Bmtc Bus: ಬೆಂಗಳೂರಿಗರೇ.. ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ! ಬಿಎಂಟಿಸಿ ಬಸ್ ದರದಲ್ಲಿ ಭಾರೀ ಇಳಿಕೆ- ಸಚಿವರಿಂದ ಮಹತ್ವದ ಘೋಷಣೆ !

Bmtc Bus: ಬೆಂಗಳೂರಿಗರೇ.. ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ! ಬಿಎಂಟಿಸಿ ಬಸ್ ದರದಲ್ಲಿ ಭಾರೀ ಇಳಿಕೆ- ಸಚಿವರಿಂದ ಮಹತ್ವದ ಘೋಷಣೆ !

1 comment
Bmtc Bus

Bmtc Bus: ಬೆಂಗಳೂರಿಗರೇ, ಸರ್ಕಾರದಿಂದ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಬಿಎಂಟಿಸಿ ಬಸ್ ದರದಲ್ಲಿ (Bmtc Bus) ಭಾರೀ ಇಳಿಕೆಯಾಗಿದೆ. ಸಚಿವರಿಂದ ಮಹತ್ವದ ಘೋಷಣೆಯಾಗಿದೆ. ರಾತ್ರಿ ಪ್ರಯಾಣಕ್ಕೆ ಇದ್ದ ಪ್ರಯಾಣ ದರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ramalinga Reddy) ಇಳಿಕೆ ಮಾಡಿದ್ದಾರೆ.

ಹೌದು, ರಾಜ್ಯದ ರಾಜಧಾನಿ ಬೆಂಗಳೂರು (Bengaluru) ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಚಾರ ಮಾಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಬೆಳಗ್ಗಿನ ವೇಳೆ ಹಾಗೂ ರಾತ್ರಿ ವೇಳೆಯ ಸಂಚಾರಕ್ಕೆ ಪ್ರತ್ಯೇಕ ಟಿಕೆಟ್‌ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಸಚಿವರಿಂದ ಮಹತ್ವದ ಘೋಷಣೆಯಾಗಿದ್ದು, ರಾತ್ರಿ ಪ್ರಯಾಣಕ್ಕೆ ಇದ್ದ ಪ್ರಯಾಣ ದರವನ್ನು ಇಳಿಕೆ ಮಾಡಲಾಗಿದೆ.

ರಾತ್ರಿ ಸೇವೆಗಳ ಸಾರಿಗೆಗಳಿಗೆ ಸಾಮಾನ್ಯ ಪ್ರಯಾಣ ದರ ನಿಗದಿ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಸಾಮಾನ್ಯ ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪ್ರಯಾಣಿಕರಿಂದ ಹೆಚ್ಚುವರಿ ಟಿಕೆಟ್ ದರವನ್ನು ಪಡೆಯಲಾಗುತ್ತಿತ್ತು. ಆದರೆ, ಈಗ ಎಲ್ಲ ಸಮಯದಲ್ಲೂ ಸಾಮಾನ್ಯ ಪ್ರಯಾಣ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶವು ದಿನಾಂಕ 06-09-2023 ರಿಂದ ಜಾರಿಗೆಯಾಗಿದೆ.

ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಸಂಚರಿಸುವ ಸಾರ್ವಜನಿಕ ಪ್ರಯಾಣಿಕರಿಗೆ ಏಕರೂಪದ ಪ್ರಯಾಣ ದರವನ್ನು ವಿಧಿಸುವ ನಿಟ್ಟಿನಲ್ಲಿ, ಸಂಸ್ಥೆಯಿಂದ ಕಾರ್ಯಾಚರಣೆ ಮಾಡುವ ರಾತ್ರಿ ಸೇವೆ (Night Service) ಸಾರಿಗೆಗಳಿಗೆ 2020ರ ಸಾಮಾನ್ಯಸ್ಥಾಯಿ ಆದೇಶದಂತೆ, ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.

ಆದೇಶದಲ್ಲಿ ಈ ಕೆಳಗಿನ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಎಲ್ಲಾ ಹಿರಿಯ/ ಘಟಕ ವ್ಯವಸ್ಥಾಪಕರುಗಳು ರಾತ್ರಿ ಸೇವೆ ಸಾರಿಗೆಗಳಿಗೆ ದೂರುಗಳಿಗೆ ಅವಕಾಶವಿಲ್ಲದಂತೆ ಸಾಮಾನ್ಯ ಸೇವೆಗಳ ಪ್ರಯಾಣ ದರವನ್ನು ಸಮರ್ಪಕವಾಗಿ ಜಾರಿಗೊಳಿಸುವುದು. ಪ್ರಯಾಣದರ ವ್ಯವಸ್ಥೆಯು ಜಾರಿಗೆ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ಇ.ಟಿ.ಎಂ ಹಾಗೂ ಮಾರ್ಗ ಪತ್ರಗಳನ್ನು ಪರಿಶೀಲಿಸಬೇಕು. ಮತ್ತು ಸಂಸ್ಥೆಯ ಆದಾಯಕ್ಕೆ ನಷ್ಟ ಮಾಡುವ ಯಾವುದೇ ತಪ್ಪುಗಳಿಗೆ ಅವಕಾಶ ಕಲ್ಲಿಸದಂತೆ ಎಚ್ಚರವಹಿಸಬೇಕು. ಈ ಸುತ್ತೋಲೆಯ ಆದೇಶದ ವಿವರಗಳ ಬಗ್ಗೆ ಮೇಲ್ವಿಚಾರಕ ಸಿಬ್ಬಂದಿಗಳಿಗೆ ಹಾಗೂ ಚಾಲನಾ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡುವುದು ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Actor Kishor: ‘ಇದ್ಯಾವುದು ಹೊಸ ಸನಾತನ ಧರ್ಮ?’ ಎನ್ನುತ್ತಾ ಉದಯನಿಧಿ ಹೇಳಿಕೆಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ನಟ ಕಿಶೋರ್ ಕುಮಾರ್- ಅಷ್ಟಕ್ಕೂ ಕಾಂತಾರದ ಪೋಲೀಸ್ ಹೇಳಿದ್ದೇನು?

You may also like

Leave a Comment