Home » Uber: ಗೂಗಲ್‌ ಟೆಕ್ಕಿಯನ್ನು ಅರ್ಧ ದಾರಿಯಲ್ಲಿ ಕೆಳಕ್ಕಿಳಿಸಿದ ಊಬರ್‌ ಚಾಲಕ

Uber: ಗೂಗಲ್‌ ಟೆಕ್ಕಿಯನ್ನು ಅರ್ಧ ದಾರಿಯಲ್ಲಿ ಕೆಳಕ್ಕಿಳಿಸಿದ ಊಬರ್‌ ಚಾಲಕ

1 comment
Uber

Uber and Google: ಗೂಗಲ್ ಟೆಕ್ಕಿ ಮತ್ತು ಊಬರ್ ಕಾರು ಚಾಲಕನ ನಡುವೆ ವಾಗ್ವಾದ ಏರ್ಪಟ್ಟು ಚಾಲಕ ಟೆಕ್ಕಿಯನ್ನು ದಾರಿ ಮಧ್ಯದಲ್ಲೇ ಕೆಳಗಿಳಿಸಿಹೋದ ಘಟನೆ ನಡೆದಿದೆ. ಘಟನೆ ಕುರಿತ ವಿವರವನ್ನು ಗೂಗಲ್ ಟೆಕ್ಕಿ ಚಾಲಕನ ಫೋಟೊ ಸಹಿತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Fuel Price: ದಿಢೀರ್‌ 15 ರೂ. ಇಂಧನ ದರ ಕಡಿತ ಮಾಡಿದ ಸರಕಾರ

ಗೂಗಲ್ ಟೆಕ್ಕಿ ಮತ್ತು ಸ್ನೇಹಿತ ಇಬ್ಬರೂ ಕಚೇರಿಗೆ ತೆರಳಲು ಊಬರ್ ಬುಕ್ ಮಾಡಿದ್ದರು. ಸುಮಾರು ಒಂದೂವರೆ ಗಂಟೆ ಅವಧಿಯ ಪ್ರಯಾಣದಲ್ಲಿ ಪ್ರಾರಂಭದ ಅರ್ಧ ಗಂಟೆ ಊಬರ್ ಚಾಲಕ ಫೋನನ್ನು ಲೌಡ್ ಸ್ಪೀಕರ್ ಮೋಡ್ ನಲ್ಲಿಟ್ಟು ಗಟ್ಟಿಯಾಗಿ ಮಾತನಾಡುತ್ತಿದ್ದ ಎಂದು ಟೆಕ್ಕಿ ದೂರಿದ್ದಾರೆ. ಈ ಸಂದರ್ಭ ಅವರು ಲೌಡ್‌ ಸ್ಪೀಕರ್ ಆಫ್ ಮಾಡಿ ಇಯರ್‌ಫೋನ್ ಬಳಸುವಂತೆ ಚಾಲಕನನ್ನು ಕೇಳಿಕೊಂಡರು. ಇದರಿಂದ ಸಿಟ್ಟಿಗೆದ್ದ ಚಾಲಕ ಟೆಕ್ಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನಿಂದ ಕೆಳಕ್ಕಿಳಿಯಲು ಆದೇಶಿಸಿದ ಎಂದು ಟೆಕ್ಕಿ ಹೇಳಿದ್ದಾರೆ. ಟೆಕ್ಕಿಯ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಕಾಮೆಂಟ್ ಬಾಕ್ಸ್‌ನಲ್ಲಿ ಇಂಥದ್ದೇ ಘಟನೆಗಳ ತಮ್ಮ ಅನುಭವಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: Nitin Gadkari: ಪ್ರಧಾನಿ ಹುದ್ದೆಯ ರೇಸ್ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದೇನು ?

You may also like

Leave a Comment