Madikeri: ಮಡಿಕೇರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಹನಿ ಟ್ರ್ಯಾಪ್ ಗೆ ಬಲಿಯಾದ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ವರದಿಯಾಗಿದೆ.
ಹೋಂ ಸ್ಟೇ ಇಂದ ಯುವಕ ಬೆತ್ತಲಾಗಿ ಓಡಿ ಬಂದಿದ್ದು ಆತನನ್ನು ಹಿಡಿದು ವಿಚಾರಣೆ ನಡೆಸಲಾಗಿದೆ.ಫೇಸ್ಬುಕ್ ನಲ್ಲಿ ಮಹೇಶ್‌ಗೆ ಮಹಿಳೆ ಪರಿಚಯವಾಗಿದ್ದಾಳೆ, ಮಡಿಕೇರಿ ಮೂಲದ ಮಹಿಳೆಯ ಜೊತೆಗೆ ಮಹೇಶ್ ಸ್ನೇಹ ಬೆಳೆಸಿದ್ದಾಳೆ, ಮಡಿಕೇರಿಗೆ ಬರುವಂತೆ ಯುವಕನಿಗೆ ಮಹಿಳೆ ಕರೆದಿದ್ದಾಳೆ . ಮಂಗಳದೇವಿ ನಗರದಲ್ಲಿ ಇರುವ ಹೋಂ ಸ್ಟೇಗೆ ಮಹೇಶ್ ಬಂದಿದ್ದಾನೆ ಹೋಂಸ್ಟೇನಲ್ಲಿ ಮಹೇಶ್ಗೆ ಹನಿ ಟ್ರ್ಯಾಪ್ ಮಾಡಿದ್ದಾರೆ ಅಲ್ಲದೇ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಹಣ ಸಹ ಕಿತ್ತುಕೊಂಡಿದ್ದಾರೆ. ಕೊನೆಗೆ ನಾನು ಅಲ್ಲಿಂದ ಓಡಿ ಬಂದಿದ್ದೇನೆ ಎಂದು ಮಹೇಶ್ ಹೇಳಿದ್ದು ಕೊನೆಗೆ ಪೊಲೀಸರು ಮಹೇಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
