Madikeri: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ಬರೋಬ್ಬರಿ ಐದು ಅಡಿಯಿಂದ ಆರರವರೆಗಿನ ಉಡವೊಂದು ಪತ್ತೆಯಾಗಿದ್ದು, ಅಳಿವನಂಚಿನಲ್ಲಿರುವ ಜೀವಿ ಇದು ಎಂದು ಹೇಳಲಾಗಿದೆ(Madikeri).
ಉಡಗಳು ಕಾಡಿನಲ್ಲಿ, ರಕ್ಷಿತಾರಣ್ಯದಲ್ಲಿ ಕಂಡು ಬರುತ್ತದೆ. ಆದರೆ ಇದು ಮನೆ ಸಮೀಪ ಪತ್ತೆಯಾಗಿದೆ. ಈ ಉಡವು ಮನೆಯೊಂದರ ಕಾಂಪೌಂಡ್ ಗೆ ಹತ್ತಿ ಕುತ್ತಿಗೆ ಹಾಕಿ ಇಣುಕಿ ನೋಡುತ್ತಾ ಕೆಲಹೊತ್ತು ನಿಂತಿದೆ. ನಂತರ ಇದು ಕಾಡಿಗೆ ಹೋಗಿ ಕಣ್ಮೆರೆಯಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಉಡವನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದರು.
ಅಂದ ಹಾಗೆ ಇದರ ವೀಡಿಯೋವನ್ನು ಸ್ಥಳೀಯರು ವೀಡಿಯೋ ಮಾಡಿದ್ದಾರೆ. ಕುಂದಾಬೆಟ್ಟ ಹಾಗೂ ದಟ್ಟವಾದ ಅರಣ್ಯವಿದ್ದು, ಅಲ್ಲಿ ದೊಡ್ಡ ದೊಡ್ಡ ಗವಿಗಳು ಹಾಗೂ ಬಂಡೆಗಳಿದೆ. ಅಲ್ಲಿಂದಲೇ ಈ ಉಡ ಬಂದಿರುವ ಸಾಧ್ಯತೆ ಹೆಚ್ಚಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ. ಈ ಉಡವು ಜಗತ್ತಿನಲ್ಲೇ ಅಪರೂಪವಾದ ಕೊಮೊಡೊ ಡ್ರ್ಯಾಗನ್ ಎಂದು ಅಲ್ಲಿನ ಜನರ ಅಭಿಪ್ರಾಯ.
ಇದನ್ನೂ ಓದಿ: Tiger pawl: ಮತ್ತೊಂದು ಹುಲಿ ಉಗುರಿನ ಪ್ರಕರಣ, ಧನಂಜಯ ಸ್ವಾಮಿಯ ಹುಲಿ ಉಗುರು ನಾಪತ್ತೆ! ಅಧಿಕಾರಿಗಳ ತನಿಖೆ!!!
