7
Madikeri: ಕೊಡಗು ಜಿಲ್ಲೆಯಲ್ಲಿ ನಿಧಿಯೊಂದು ಪತ್ತೆಯಾಗಿದೆ. ಹೌದು, ವಿರಾಜಪೇಟೆ ತಾಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನದಲ್ಲಿ ನಿಧಿ ದೊರಕಿದೆ.
ಕಾಫಿತೋಟವು ಟಾಟಾ ಕಾಫಿ ಸಂಸ್ಥೆಗೆ ಸೇರಿದ್ದಾಗಿದೆ. ಈ ಕಾಫಿತೋಟದಲ್ಲೇ ಪುರಾತನ ಈಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯಡಿಯಲ್ಲಿ ಮಣ್ಣಿನ ಮಡಿಕೆ ಪತ್ತೆಯಾಗಿದೆ. ಅದರಲ್ಲಿ ಚಿನ್ನದ ಆಭರಣ ಕಂಡು ಬಂದಿದೆ.
ಕೂಡಲೇ ಟಾಟಾ ಕಾಫಿ ತೋಟ ಸಂಸ್ಥೆ ವ್ಯವಸ್ಥಾಪಕರು, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ನಂತರ ವಿರಾಜಪೇಟೆ ತಹಶೀಲ್ದಾರ್ ಸಮ್ಮುಖದಲ್ಲಿ ಮಹಜರು ನಡೆಸಿದ್ದಾರೆ. ಅನಂತರ ಕೊಡಗು ಜಿಲ್ಲಾಧಿಕಾರಿ ವಶಕ್ಕೆ ನಿಧಿಯನ್ನು ಹಸ್ತಾಂತರ ಮಾಡಿದ್ದಾರೆ.
