Home » Sullia: ಸುಳ್ಯ: ಚಪ್ಪಲಿಯೊಳಗೆ ಸೇರಿಕೊಂಡಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ

Sullia: ಸುಳ್ಯ: ಚಪ್ಪಲಿಯೊಳಗೆ ಸೇರಿಕೊಂಡಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ

0 comments
Plants

Sullia: ಚಪ್ಪಲಿಯೊಳಗೆ ಸೇರಿಕೊಂಡಿದ್ದ ವಿಷದ ಹಾವು ಕಚ್ಚಿ ಮಹಿಳೆ ಅಸ್ವಸ್ಥರಾದ ಘಟನೆ ಭಾನುವಾರ ಸುಳ್ಯದ (Sullia) ಅಲೆಟ್ಟಿಯಲ್ಲಿ ಸಂಭವಿಸಿದೆ. 

ಅಲೆಟ್ಟಿ ಗ್ರಾಮದ ಕೋಲ್ಟಾರಿನ ವಿನುತಾ ನಿನ್ನೆ ಬೆಳಗ್ಗೆ ಮನೆಯ ಅಂಗಳದಲ್ಲಿಟ್ಟಿದ್ದ ಚಪ್ಪಲಿ ಧರಿಸಲು ಹೋದಾಗ ಅದರೊಳಗೆ ಸೇರಿಕೊಂಡಿದ್ದ ವಿಷದ ಹಾವು ಕಾಲಿಗೆ ಕಚ್ಚಿದೆ.

ಕೂಡಲೇ ಅವರನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

You may also like