Sullia:ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಎಂ.ಪಿ.ಎಲ್-2026 (ಮೆಡಿಕಲ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಹಾಗೂ ಥೋಬಾಲ್ ಪಂದ್ಯಾಟ ಜ. 03 ಮತ್ತು 04 ರಂದು ಎನ್.ಎಂ.ಸಿ ಕ್ರೀಡಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ನೆರವೇರಿಸಿದರು.
ಈ ಸಂದರ್ಭ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ, ಕೆವಿಜಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಚಂದ್ರಾವತಿ, ನರ್ಸಿಂಗ್ ಸೈನ್ಸ್ ಪ್ರಾಂಶುಪಾಲ ಡಾ. ಪ್ರಮೋದ್ ಕೆ.ಜೆ, ಗಣ್ಯರಾದ ಡಾ. ರವಿಕಾಂತ್, ಡಾ. ಗೀತಾ ದೊಪ್ಪ, ಡಾ. ಲಕ್ಷ್ಮಿ, ಡಾ. ನಮೃತ ಕೆ.ಜಿ, ಡಾ. ಶೃತಿ ಪಿ ರೈ, ಸಾಯಿರಾಂ ಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರೀಮಿಯರ್ ಲೀಗ್‌ನಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಆಯುರ್ವೇದ ಫಾರ್ಮಾ ಹಾಗೂ ಸಂಶೋಧನಾ ಕೇಂದ್ರ, ನರ್ಸಿಂಗ್ ವಿಜ್ಞಾನ ಸಂಸ್ಥೆ, ನರ್ಸಿಂಗ್ ಇನ್‌ಸ್ಟಿಟ್ಯೂಟ್, ಕಾನೂನು ಮಹಾವಿದ್ಯಾಲಯ, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಎಂ.ಪಿ.ಎಲ್ ಆಯೋಜಕರಾದ ಅಶೋಕ್, ರವಿ ಮತ್ತು ನವೀನ್ ಸಹಕರಿಸಿದರು. ಈ ಸಂದರ್ಭ ಸಂಸ್ಥೆಯ ಸಹೋದ್ಯೋಗಿ ವಸಂತ್ ಸುವರ್ಣ ಸವಿನೆನಪಿಗಾಗಿ ಹೆಚ್. ಟಿ ಪವರ್ ಹೌಸ್ ವಿಭಾಗದಿಂದ ವಿಜೇತ ತಂಡಗಳಿಗೆ 130 ಕೆಜಿ ಅಕ್ಕಿ ವಿತರಣೆ ಮಾಡಲಾಯಿತು.
