Home » ತಪ್ಪು ರೈಲಿಗೆ ಹತ್ತಿ, ಇಳಿಯುವ ಭರದಲ್ಲಿ ಪ್ರಾಣ ಕಳೆದುಕೊಂಡ ಇಂಜಿನಿಯರ್ !!

ತಪ್ಪು ರೈಲಿಗೆ ಹತ್ತಿ, ಇಳಿಯುವ ಭರದಲ್ಲಿ ಪ್ರಾಣ ಕಳೆದುಕೊಂಡ ಇಂಜಿನಿಯರ್ !!

0 comments

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸೂಪರಿಂಟೆಂಡೆಂಟ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಬಿಬಿಎಂಪಿಯ ಕೆಆರ್‌ಐಡಿಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿದ್ದ ರಂಗರಾಜು ಎಸ್.ಎ (59) ಮೃತಪಟ್ಟವರು. ಇವರು ರಾತ್ರಿ 11:30 ರ ಸುಮಾರಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಇವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಆದರೆ ತಪ್ಪು ತಿಳಿವಳಿಕೆಯಿಂದಾಗಿ ಇವರು ಹುಬ್ಬಳ್ಳಿ – ಬೆಂಗಳೂರು ರೈಲಿನ ಬದಲು ಬೆಳಗಾವಿ ಬೆಂಗಳೂರು ರೈಲಿಗೆ ಹತ್ತಿದ್ದರು. ರೈಲು ಏರುತ್ತಿದ್ದಂತೆಯೇ ತಾವು ಬೇರೆ ರೈಲು ಹತ್ತಿರುವುದು ತಿಳಿದಿದೆ. ಆಗ ಧಾವಂತದಿಂದ ರೈಲನ್ನು ಇಳಿಯಲು ಪ್ರಯತ್ನಿಸಿದ್ದಾರೆ.

ಅದಾಗಲೇ ರೈಲು ಚಲಿಸಲು ಶುರು ಮಾಡಿತ್ತು. ಲಗುಬಗೆಯಿಂದ ರೈಲು ಚಲಿಸುತ್ತಿರುವಾಗಲೇ ಇಳಿಯಲು ಹೋಗಿದ್ದಾರೆ. ಆಯತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕುತೂಹಲ,ಆತಂಕಕ್ಕೆ ಕಾರಣವಾಯಿತು ಗುರುತಿಸಲಾಗದ ಹಾರುವ ವಸ್ತು | ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು?

You may also like

Leave a Comment