Bangalore Stampede: ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಸಂಭ್ರಮಾಚರಣೆಗೆ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಕ್ಷಾಂತರ ಜನರ ನೂಕುನುಗ್ಗಲಿನ ಕಾರಣ 11 ಜನರು ಸಾವಿಗೀಡಾಗಿದ್ದರು. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಇದೀಗ ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮೃತರಲ್ಲಿ ಭೂಮಿಕ್ ಎನ್ನುವಾತ ಕೂಡಾ ಒಬ್ಬ. ಆತನ ತಂದೆ ತನ್ನ ಮಗನ ಸಾವಿಗೆ ನೊಂದು ಹೇಳಿದ ಮಾತಿದು.
Vinay Guruji: RCB ಸಂಭ್ರಮದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣ – ತಪ್ಪು ಯಾರದೆಂದು ತಿಳಿಸಿದ ವಿನಯ್ ಗುರೂಜಿ!!
“ಈ ಥರ ಪಟಾಕಿ ಹೊಡೆಯಬಾರದು, ಆಸ್ತಿ ಬೇಜಾನ್ ಇದೆ, ಯಾರಿಗೋಸ್ಕರ 100 ಕೋಟಿ ರೂಪಾಯಿ ಆಸ್ತಿ ಮಾಡಿಟ್ಟೆ? ಈಗ ಅವನು ಹೊತ್ಕೊಂಡು ಹೋದ್ನಾ? ಅವನು ಹೆಂಗೆ ಇದ್ದನೋ ಹಾಗೆ ಅವನನ್ನು ಕಳಿಸಿಕೊಡ್ತೀನಿ. ನಾನು ಬೇರೆಯವರಿಗೋಸ್ಕರ ಬದುಕಿಲ್ಲ, ಅವನಿಗೋಸ್ಕರ ಬದುಕಿದ್ದೀನಿ. ನನಗೆ ಯಾರಿಂದಲೂ ಸಲಹೆ ಕೇಳೋದು ಬೇಕಾಗಿಲ್ಲ. ಅವನು ಯಾರ ಮಾತನ್ನು ಕೇಳುತ್ತಿರಲಿಲ್ಲ, ಈಗಲೂ ನಾನು ಕೂಡ ಯಾರ ಮಾತನ್ನು ಕೇಳೋದಿಲ್ಲ” ಎಂದು ಭೂಮಿಕ್ ತಂದೆ ಹೇಳಿದ್ದಾರೆ.
Mangalore: ಹುಚ್ಚು ಅಭಿಮಾನದ ಹುಚ್ಚಾಟಕ್ಕೆ ಬೀದಿ ಹೆಣವಾದ ದುರಾಭಿಮಾನಿಗಳು!
“ನಾನು ಕೋಟಿಗಟ್ಟಲೇ ಟ್ಯಾಕ್ಸ್ ಕಟ್ಟುವೆ. ನನಗೂ ಒಬ್ಬನೇ ಮಗ ಇರೋದು. ನಾನು 20 ವರ್ಷ ಕೈತುತ್ತು ಕೊಟ್ಟು ನನ್ನ ಮಗನನ್ನು ಸಾಕಿದ್ದೀನಿ. ನನ್ನ ಮಗ ಪೊರ್ಕಿ ಹುಡುಗ ಅಲ್ಲ. ಊರಿಂದ ಬೆಂಗಳೂರು ಕಾಲೇಜುವರೆಗೆ ಕೇಳಿದ್ರೂ ಅವನು ಓದು ಬಿಟ್ಟು ಯಾವುದೇ ಆಕ್ಟಿವಿಟಿ ಮಾಡಿಲ್ಲ. ಒಂದು ದಿನವೂ ಚಕ್ಕರ್ ಹಾಕದೆ ಅವನು ಶಾಲೆಗೆ ಹೋಗಿದ್ದಾನೆ. ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ರೆ ನನ್ನ ಮಗ ಉಳಿಯುತ್ತಿದ್ದ. ನಿನ್ನೆಯಿಂದ ನಾನು ನೋವಿನಲ್ಲಿದ್ದೇನೆ” ಎಂದು ಭೂಮಿಕ್ ತಂದೆ ಹೇಳಿದ್ದಾರೆ.
“ದುಡ್ಡು, ರಾಜಕೀಯ ಶಾಶ್ವತ ಅಲ್ಲ, ನೀವು ಐದು ವರ್ಷ ಮಾತ್ರ ಅಧಿಕಾರದಲ್ಲಿ ಇರುತ್ತೀರಾ. ಬೇಕು ಅಂತಲೇ ನಮ್ಮ ಮಕ್ಕಳನ್ನು ಕೊ*ಲೆ ಮಾಡಿದ್ದೀರಾ. ನಮಗೆ ಬಂದ ಸ್ಥಿತಿ ನಿಮ್ಮ ಮಕ್ಕಳಿಗೂ ಬರಬೇಕು. ನನ್ನ ಹಾಗೆ 11 ಮಕ್ಕಳ ಪಾಲಕರ ಶಾಪ ನಿಮಗೆ ತಟ್ಟೇ ತಟ್ಟುತ್ತದೆ. ನಿಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋಕೆ ಆಸ್ಪತ್ರೆಗೆ ಬಂದು ಹೋದ್ರಿ” ಎಂದು ಭೂಮಿಕ್ ತಂದೆ ಹೇಳಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ವರದಿ.
RCB ಗೆಲುವನ್ನು ಸಂಭ್ರಮಿಸಿದ ವಿಜಯ್ ಮಲ್ಯ ಟ್ವೀಟ್‌ಗೆ ʼಪ್ರೀತಿʼ ಭರಿತ ವಿಶೇಷ ಆಹ್ವಾನ ಕೊಟ್ಟ SBI
